ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ನಿರ್ಮಾಪಕ ಉಮಾಪತಿಗೆ ಬಳಸಿರುವ ಪದ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಗಡೇ ಹಾಗೂ ಗುಮ್ಮಿಸ್ಕೊತ್ತೀಯಾ ಪದ ಬಳಕೆ ಹಿನ್ನೆಲೆ ಈಗಾಗಲೇ ನಟ ದರ್ಶನ್ ವಿರುದ್ಧ ದೂರು ದಾಖಲಾಇಗದೆ. ಈ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರೆ ಇದೀಗ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಹಿಳೆಯರು ಇದೀಗ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಜಯಶ್ರೀ , ರೇಣುಕಾ ನೇತೃತ್ವದಲ್ಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ ಮಹಿಳೆಯರು ನಟ ಮಹಿಳೆಯರ ಕುರಿತು ಮಾಡಿದ ಕಮೆಂಟ್ ಖಂಡಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ದರ್ಶನ್ 25 ನೇ ಪರ್ವದಲ್ಲಿ ದರ್ಶನ್ ಮಾತಿನ ಭರದಲ್ಲಿ ಹೇಳಿದ ಹೇಳಿಕೆ ಈಗ ವಿವಾದಕ್ಕೆ ದಾರಿ ಮಾಡಿದೆ.
ಒಬ್ಬಳು ಇವತ್ತು ಬರ್ತಾಳೆ , ನಾಳೆ ಅವಳು ಹೋಗ್ತಾಳೆ .ಅವರ ಅಜ್ಜಿನ. ಬಡಿಯಾ ಪದ ಬಳಕೆ ಈಗ ವಿವಾದಕ್ಕೆ ಕಾರಣವಾಗಿದೆ. ಸಾರ್ವಜನಿಕವಾಗಿ ಮಹಿಳೆಯರಿಗೆ ಅವಮಾನ ಮಾಡಿದ್ದಾಗಿ ಮಹಿಳೆಯರು ಆರೋಪಿಸಿದ್ದಾರೆ. ಜವಾಬ್ದಾರಿಯುತ ನಟ ಈತರ ಪದ ಬಳಸೋದು ಎಷ್ಟು ಸರಿ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ.
ಕಾಟೇರ ಸಿನಿಮಾ 50 ದಿನ ಪೋರೈಸಿದ ಹಿನ್ನೆಲೆಯಲ್ಲಿ ಪ್ರಸನ್ನ ಥಿಯೇಟರ್ನಲ್ಲಿ ಸಂಭ್ರಮಾಚರಣೆ ನಡೆದಿದೆ. ಈ ಒಂದು ಇವೆಂಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಉಮಾಪತಿ ಅವರ ಕುರಿತು ಮಾತನಾಡಿ ತಗಡು ಎಂಬ ಪದವನ್ನು ಬಳಿಸಿದರು. ಇದು ಸಾಕಷ್ಟು ವಿವಾದ ಹುಟ್ಟುಹಾಕಿದೆ.