ಸಿಲಿಕಾನ್ ಸಿಟಿಯಲ್ಲಿ ಎರಡು ದಿನ ನೀರು ಪೂರೈಕೆ ಇಲ್ಲ (No Water Supply) ಎಂದು ಬೆಂಗಳೂರು ಜಲಮಂಡಳಿ (Water Board) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನೀರಿನ ಅಭಾವದ ಮಧ್ಯೆ ಕಾವೇರಿ ನಾಲ್ಕನೇ ಹಂತದ 2ನೇ ಘಟಕ ಸಂಪೂರ್ಣ ಸ್ಥಗಿತವಾಗಲಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 27 ಮತ್ತು 28ರಂದು ಹಲವು ಏರಿಯಾಗಳಲ್ಲಿ ನೀರು ಬಂದ್ ಆಗಲಿದೆ. ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರ, ಯಲಹಂಕ, ವಿದ್ಯಾರಣ್ಯಪುರ ಹಾಗೂ ಪೂರ್ವ ವಲಯದ ಏರಿಯಾಗಳಲ್ಲಿ ನೀರು ಸಿಗಲ್ಲ.
ತುರ್ತು ನಿರ್ವಹಣೆ ಮತ್ತು ಯುಎಫ್ಡಬ್ಲ್ಯೂ ಬಲ್ಕ್ ಪ್ಲೋ ಮೀಟರ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳುವ ಕಾರಣ ಬೆಂಗಳೂರು ಮಹಾನಗರದ ವಿವಿಧೆಡೆ ಎರಡು ದಿನಗಳ ನೀರು ವ್ಯತ್ಯಯವಾಗಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಕಾವೇರಿ ಕುಡಿಯುವ ನೀರು ಪೂರೈಕೆ ಸ್ಥಗಿತವಾಗಲಿದೆ.
ನಂದಿನಿ ಲೇಔಟ್, ಬಿಎಚ್ಇಎಲ್ ಲೇಔಟ್, ನಂದಿನಿ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ ಮತ್ತು ಬಡವಣೆ, ಸಾಕಮ್ಮ ಲೇಔಟ್, ನರಸಿಂಹ ಸ್ವಾಮಿ ಲೇಔಟ್, ಮುನೇಶ್ವರ ನಗರ, ಜ್ಞಾನ ಜ್ಯೋತಿ ನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್ಜಿಇಎಫ್ ಲೇಔಟ್, ಐಟಿಐಡಿ 2ನೇ ಭಾಗ ರೈಲ್ವೇ ಲೇಔಟ್, ಆರ್ಎಚ್ಬಿಸಿಎಸ್ ಲೇಔಟ್ 1 ಮತ್ತು 2ನೇ ಹಂತ, ಬೈರವೇಶ್ವರನಗರ, ಸುಂಕದಕಟ್ಟೆ, ಜಯ ಲಕ್ಷ್ಮಮ್ಮ ಲೇಔಟ್, ಕೆಬ್ಬೆಹಳ್ಳ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಭೂವಿಜ್ಞಾನ ಬಡಾವಣೆ, ನರಸಾಪುರ, ಕಂದಾಯ ಲೇಔಟ್, ಮುಳಕತ್ತಮ್ಮ ಲೇಔಟ್, ಬಿಇಎಲ್1ಪಾಳ್ಯ, ಬಿಇಎಲ್1 ಪಾಳ್ಯ, ಬಿಇಎಲ್1 ಪಾಳ್ಯ ಬ್ಯಾಡರಹಳ್ಳಿ, ಉಪಕಾರ್ ಲೇಔಟ್ ಮತ್ತು ಪಶ್ಚಿಮ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ಇರಲ್ಲ