ಬೆಂಗಳೂರು: ರಾಜ್ಯದಲ್ಲಿ ಈಗ ಲೋಕಸಭಾ ಎಲೆಕ್ಷನ್ ಫೈಟ್ ಜೋರಾಗಿದ್ದು ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲು ದೆಹಲಿಗೆ ಹೋಗಿದ್ವಿ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಕೆಲವೇ ದಿನಗಳಲ್ಲಿ ಸೀಟು ಹಂಚಿಕೆಯ ಎಲ್ಲಾ ಗೊಂದಲ ನಿವಾರಣೆ ಮಾಡ್ತೀವಿ ರಾಷ್ಟ್ರನಾಯಕರು ಕುಮಾರಸ್ವಾಮಿ, ದೇವೇಗೌಡರು ತೀರ್ಮಾನ ಮಾಡ್ತಾರೆ ಕಳೆದ ವಿಧಾನಸಭೆ ಚುನಾವಣೆ ಓಟ್ ಶೇರ್ ತೆಗೆದುಕೊಂಡ್ರೆ ಮಂಡ್ಯದಲ್ಲಿ ಬಿಜೆಪಿಗಿಂತ ಮೂರು ಪಟ್ಟು ಹೆಚ್ಚಿನ ಮತಗಳಿವೆ
ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಗೆ ಹರಿಸೊ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ ಮಂಡ್ಯ ವಿಚಾರಕ್ಕೆ ಪದೇ ಪದೇ ಏಕೆ ಚರ್ಚೆ ಮಾಡ್ತೀರಾ ನಮ್ಮ ಮುಂದೆ ಇರುವುದು 28ಲೋಕಸಭಾ ಕ್ಷೇತ್ರ ಮಂಡ್ಯದಲ್ಲಿ ನಾನು ನಿಲ್ತೇನೋ, ಕುಮಾರಸ್ವಾಮಿ ನಿಲ್ತಾರೋ ಅಥವಾ ಬೇರೆ ಅರ್ಹರು ಯಾರು ನಿಲ್ತಾರೋ ಬಿಜೆಪಿ ಹೈಕಮ್ಯಾಂಡ್ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿ ತೀರ್ಮಾನ ಕೊಡ್ತಾರೆ
ಈಗಿನ ಸರ್ಕಾರ ಎಲ್ಲೋ ಒಂದು ಕಡೆ ಅಧಿಕಾರ ದುರುಪಯೋಗ ಮಾಡಿಕೊಳ್ಳೊ ಪ್ರಯತ್ನ ಮಾಡ್ತಿದೆಇದು ಹೆಚ್ಚು ದಿನ ನಡೆಯಲ್ಲ, ಮುಂದಿನ ಎರಡು ಮೂರು ದಿನ ಇದೆ ಯಾವ ರೀತಿ ತೀರ್ಮಾನ ಮಾಡುತ್ತೋ ಕಾದು ನೋಡೋಣ ಎಂದು ಹೇಳಿದರು.