ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ ಪತ್ನಿಯ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿ ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ದತ್ತಾಂಶಗಳನ್ನು ತಿಳಿದು, ಅವುಗಳ ಆಧಾರದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಿ 16.58 ಕೋಟಿ ರೂ. ಘಳಿಸಿದ್ದ ಪತಿಗೆ ಪತ್ನಿ ವಿಚ್ಚೇದನ ನೀಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಟೆಕ್ಸಾಸ್ ನಿವಾಸಿ ಟೈಲರ್ ಲೌಡನ್ ಅವರ ಪತ್ನಿ ಬ್ರಿಟಿಷ್ ಪೆಟ್ರೋಲಿಯಂ (ಬಿಪಿ) ಸಂಸ್ಥೆಯಲ್ಲಿ ವಿಲೀನ ಮತ್ತು ಸ್ವಾಧೀನ ವಿಭಾಗದಲ್ಲಿ ನಿರ್ವಹಣ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿ ದ್ದರು. ಬಿಪಿ ಸಂಸ್ಥೆಯು ಅಮೆರಿಕ ಐಎನ್ಸಿಯ ಟ್ರಾವೆಲ್ಸ್ ಸಂಸ್ಥೆಗಳನ್ನು ಖರೀದಿಸಲು ಯೋಜಿಸಿದ್ದು, ಅದರ ಮೇಲ್ವಿಚಾರಣೆಯನ್ನೂ ನೋಡಿಕೊ ಳ್ಳುತ್ತಿದ್ದರು. ಆಕೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ಟೈಲರ್ ಪತ್ನಿಯ ಫೋನ್ ಕರೆಗಳನ್ನು ಕದ್ದಾಲಿಸಿ ಈ ಬಗ್ಗೆ ತಿಳಿದುಕೊಂಡು, ಟ್ರಾವೆಲ್ ಸಂಸ್ಥೆಗಳ ಷೇರನ್ನು ಖರೀದಿಸಿದ್ದಾರೆ. ಈ ಮೂಲಕ 16.58 ಕೋಟಿ ರೂ. ಗಳ ಲಾಭ ಪಡೆದಿದ್ದಾರೆ. ಇತ್ತ ಸಂಸ್ಥೆಯು ಮಾಹಿತಿ ಸೋರಿಕೆಯಾಗಿದೆ ಎಂದು ಟೈಲರ್ ಅವರ ಪತ್ನಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದರಿಂದ ಮನನೊಂದಿ ಪತ್ನಿ ಪತಿಯಿಂದ ವಿಚ್ಚೇದನ ಪಡೆದಿದ್ದಾರೆ.