ಪಂದ್ಯದ ವೇಳೆ ವಿವಾದಾತ್ಮಕ ರನೌಟ್: ಪಾಕಿಸ್ತಾನದ ದೇಶೀಯ ಟಿ20 ಟೂರ್ನಮೆಂಟ್ ಪಾಕಿಸ್ತಾನ್ ಸೂಪರ್ ಲೀಗ್ನ ಹೊಸ ಋತುವಿನಲ್ಲಿ ನಡೆದ ಪಂದ್ಯದ ವೇಳೆ ವಿವಾದವೊಂದು ಭುಗಿಲೆದ್ದಿದೆ. ಫೆಬ್ರವರಿ 22, ಗುರುವಾರದಂದು ಇಸ್ಲಾಮಾಬಾದ್ ಯುನೈಟೆಡ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಸ್ಲಾಮಾಬಾದ್ ಯುನೈಟೆಡ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ 9 ವಿಕೆಟ್ಗೆ 138 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡ 18.2 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ವೇಳೆ ನಡೆದ ಅದೊಂದು ರನೌಟ್ ಇದೀಗ ವಿಶ್ವ ಕ್ರಿಕೆಟ್ ನಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ.