ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಂತರ್ ಜಲ ಹೆಚ್ಚಿರುವ ಕಡೆ ಬೋರ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಸಮನ್ವಯ ಸಮಿತಿ ರಚನೆ ಮಾಡಲಾಯಿತು. ಸಮಿತಿ ರಚನೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಬಿಎಂ ಆಯುಕ್ತರು, ಬಿಬಿಎಂಪಿ ಹಾಗೂ BWSSB ಸಹಯೋಗದಲ್ಲಿ ಕೆಲಸ ಮಾಡಲಿದೆ. ಬಿಬಿಎಂಪಿಯಿಂದ ನೀರಿನ ಸರಬರಾಜಿಗಾಗಿ 131 ಕೋಟಿ ಹಣ ಖರ್ಚು ಮಾಡಲಾಗುವುದು. ಆರ್ ಆರ್ ನಗರ, ಮಹದೇವಪುರದಲ್ಲಿ ಹೆಚ್ಚಿನ ಸಮಸ್ಯೆಯಾಗಿವೆ. ಆರ್ ಆರ್ ನಗರದ 25 ಕಡೆ ನೀರಿನ ಸಮಸ್ಯೆಯಾಗಿದೆ ಎಂದರು.
ಖಾಸಗಿ ನೀರಿನ ಟ್ಯಾಂಕರ್ಗಳನ್ನು ನಾವೇ ತೆಗೆದುಕೊಳ್ಳುತ್ತೇವೆ ಖಾಸಗಿ ನೀರಿನ ಟ್ಯಾಂಕರ್ಗಳಿಗೆ ನಾವೇ ದರ ನಿಗದಿ ಮಾಡ್ತವೆ ಆ ದರವನ್ನು ಖಾಸಗಿ ಟ್ಯಾಂಕರ್ ಮಾಲೀಕರಿಗೆ ನೀಡುತ್ತೇವೆ ಬಿಬಿಎಂಪಿ ಮುಖ್ಯ ಅಯುಕ್ತ ತುಷಾರ್ ಗಿರಿನಾಥ್ ಹೇಳಿದರು
ನಾವು ಹಾಗೂ BWSSB ಸೇರಿ ಬೋರ್ವೆಲ್ಗಳನ್ನು ಕೊರೆಸುತ್ತೇವೆ ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ BWSSBಗೆ ಕೊಡುತ್ತೇವೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀರಿಗಾಗಿ ಒಟ್ಟು 131 ಕೋಟಿ ರೂಪಾಯಿ ಹಣ ಮೀಸಲಿಟ್ಟಿದ್ದೇವೆ 110 ಹಳ್ಳಿಗಳಿಗೆ 40 ಸಾವಿರ ಕನೆಕ್ಷನ್ ಕೊಟ್ಟಿದ್ದೇವೆ ತುಷಾರ್ ಕಾವೇರಿ 5ನೇ ಹಂತ ಬರುವವರೆಗೂ ವಲಯ ಆಯುಕ್ತರು ಹಾಗೂ BWSSB ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ