ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇತ್ತ ಮಳೆ ಕಡಿಮೆಯಾಗಿ ಬರಗಾಲ ಎದುರಾಗಿದ್ದು ನೀರಿನ ಹಾಹಾಕಾರ ಎದುರಾಗಿದೆ. ನದಿಗಳಲ್ಲಿ ಅಷ್ಟಾಗಿ ನೀರಿಲ್ಲ. ಆದರೂ ನೀರು ಪೂರೈಸಬೇಕಿದೆ. ಹಾಗಾದರೆ ಸರ್ಕಾರ ನೀರಿನ ಅಭಾವ ತಡೆದು ಅಗತ್ಯ ಪೂರೈಕೆಗೆ ಕೈಗೊಳ್ಳಲಿರುವ ಮಾರ್ಗೋಪಾಯ, ಕ್ರಮಗಳ ಪೂರ್ಣ ಮಾಹಿತಿ ಇಲ್ಲಿದೆ.ಬೆಂಗಳೂರಿನಲ್ಲಿ ನೀರಿನ ಅಭಾವ ಉದ್ಬವವಾಗದಂತೆ BBMP ಹಾಗೂ BWSSB ಸೂಕ್ತ ಕ್ರಮ ಕೈಗೊಳ್ಳಲು ನಗರಾಭಿವೃದ್ಧಿ ಇಲಾಖೆ ನಿರ್ದೇಶಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಕಡೆ ನೀರಿನ ಅಭಾವ ಸೃಷ್ಠಿಯಾಗಿದೆ . ಹನಿ ನೀರಿಗಾಗಿಯೂ ಜನ ಪರದಾಡುತ್ತಿದ್ದು ದುಪ್ಪಟ್ಟು ಹಣ ನೀಡಿದರೂ ಜನರಿಗೆ ಟ್ಯಾಂಕರ್ ನೀರು ಸಿಗುತ್ತಿಲ್ಲ. ಬೇಸಿಗೆ ಆರಂಭಕ್ಕು ಮುನ್ನವೇ ನಗರದಲ್ಲಿ ಈ ರೀತಿಯ ಸ್ಥಿತಿ ನಿರ್ಮಾಣವಾಗಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬಿಬಿಎಂಪಿ ಇಂದು ಸಭೆ ನಡೆಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್ವಲ್ ಕೊರೆಸಲು ನಿರ್ಧಾರ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಗೆಚ್ಚಾಗಿದ್ದರಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಸಮನ್ವಯ ಸಮಿತಿ ರಚನೆ ಮಾಡಲಾಯಿತು. ಸಮಿತಿ ಬಿಬಿಎಂಪಿ ಹಾಗೂ BWSSB ಸಹಯೋಗದಲ್ಲಿ ಕೆಲಸ ಮಾಡಲಿದೆ. ಬಿಬಿಎಂಪಿಯಿಂದ ನೀರಿನ ಸರಬರಾಜಿಗಾಗಿ 131 ಕೋಟಿ ರೂ. ಖರ್ಚು ಮಾಡಲಾಗುವುದು. ಆರ್ ಆರ್ ನಗರ,ಮಹದೇವಪುರದಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ ಎಂದು ಹೇಳಿದ್ದಾರೆ.
1477 ದಶಲಕ್ಷ ಲೀಟರ್ ನೀರು ಈಗ ಲಭ್ಯತೆಯಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ನೀರನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತೆ. ಹೀಗಾಗಿ ಅಂತರ್ ಜಲ ಹೆಚ್ಚಿರುವ ಕಡೆ ಬೋರ್ ಕೊರೆಯಲು ನಿರ್ಧಾರ ಮಾಡಲಾಗಿದೆ. ಜಲಮಂಡಳಿ ಬೋರ್ ಕೊರೆಯುವ ಕೆಲಸ ಮಾಡಲಾಗುತ್ತೆ. ಇದರ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೂ ನೀರು ಒದಗಿಸಲಾಗುತ್ತೆ ಎಂದು ಹೇಳಿದರು.
ಒಟ್ಟಾರೆ ಬೇಸಿಗೆಗು ಮುನ್ನ ಬೆಂಗಳೂರಲ್ಲಿ ಜಲ ದಾಹ ಉಂಟಾಗಿದೆ. ನಲ್ಲಿ ನೀರು ಬರುತ್ತಿಲ್ಲ ಟ್ಯಾಂಕರ್ ನೀರು ಸಿಗುತ್ತಿಲ್ಲ ದಿನನಿತ್ಯ ಬಳಕೆಗು ನೀರಿಲ್ಲದೆ ನಿವಾಸಿಗಳು ಕಂಗಾಲಾಗಿದ್ದಾರೆ ನೀರಿನ ಸಮಸ್ಯೆ ಹೇಗೆ ಸೇರಿದ ಪಾಲಿಕೆ ವಿರುದ್ಧ ಜನರು ಅಕ್ರೋಶ ಹೊರಹಾಕುತ್ತಿದ್ದಾರೆ ನೀರಿಲ್ಲಿದ್ದಕ್ಕೆ ಮನೆಯನ್ನು ಬಾಡಿಗೆದಾರರು ತರೆಯುತ್ತಿದ್ದಾರೆ ಇದೇ ವೇಳೆ ನೀರಿನ ಸಂಕಷ್ಟದಿಂದ ಮನೆ ಮಾಲೀಕರು ಕೂಡ ಕಂಗಾಲಾಗಿದ್ದಾರೆ. ಇದೀಗ ಬಿಬಿಎಂಪಿ ನೀರಿನ ಬವಣೆ ನೀಗಿಸಲು 131 ಕೋಟಿ ಮೀಸಲಿಟ್ಟಿದೆ.