ದೊಡ್ಡಬಳ್ಳಾಪುರ: ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಇಂದು ನವೋದಯ ಚಾರಿಟೆಬಲ್ ಟ್ರಸ್ಟ್, ಆತ್ರೇಯ ಆಯುರ್ವೇದ ಮಹಾವಿದ್ಯಾಲಯ ಸಂಶೋಧನಾ ಕೇಂದ್ರಗಳ ಸಹಯೋಗದೊಂದಿಗೆ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲ್ನಡಿಗೆ ಜಾಥವನ್ನು ಆಯೋಜಿಸಲಾಗಿತ್ತು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಜಾಥಗೆ ವೈದ್ಯಾಧಿಕಾರಿಗಳಾದ ಡಾ.ಆರ್ ರಮೇಶ್ ಚಾಲನೆ ನೀಡಿ ಮುತ್ಸಂದ್ರ ಗ್ರಾಮದ ಮೂಲಕ ಕ್ಯಾನ್ಸರ್ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮಂಡಿಸಲಾಯಿತು..
ಇದೆ ವೇಳೆ ಆರೋಗ್ಯಾಧಿಕಾರಿ ಡಾ. ಶಾರದ ಮಾತನಾಡಿ
ಸಣ್ಣ ಗಾಯ ಅಥವಾ ಗಡ್ಡೆ ರೂಪದಲ್ಲಿ ಇರುವಂತಹ ಚಹರೆಗಳನ್ನು ಪ್ರಥಮ ಹಂತದಲ್ಲೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಬಹುದು.
ಮಹಿಳೆಯರು ಯಾವುದೇ ರೀತಿ ಭಯಪಡದೆ ಚಿಕಿತ್ಸೆಗೆ ಮುಂದಾಗಬೇಕು ಆಗ ಮಾತ್ರ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್ ಅನ್ನು ಗುಣಪಡಿಸಿಕೊಳ್ಳಬಹುದೆಂದು ತಿಳಿಸಿದರು.
ನವೋದಯ ಟ್ರಸ್ಟ್ ನ ಸಂಯೋಜಕರಾದ ಜನಾರ್ದನ್ ಮಾತನಾಡಿ ಇಂದಿನ ಯುವ ಪೀಳಿಗೆ ಶೋಕಿಗಾಗಿ ತಂಬಾಕು ಗುಟ್ಕಾ ಮುಂತಾದ ದುಶ್ಚಟಗಳಿಗೆ ಬಲಿಯಾಗಿ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಪೋಷಕರು ಕೂಡ ಸಣ್ಣ ಮಕ್ಕಳ ಕೈಗೂ ಆಟವಾಡಲು ಮೊಬೈಲ್ ಗಳನ್ನು ನೀಡಿ ಹೆಚ್ಚು ಮೊಬೈಲ್ ರೇಡಿಯೇಷನ್ ನಿಂದ ಮೆದುಳು ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ ಆದರಿಂದ ಪೋಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನವೋದಯ ಟ್ರಸ್ಟ್ ನ ಜಂಟಿ ಕಾರ್ಯದರ್ಶಿ ಕಾರ್ತಿಕ್ ಗೌಡ, ಕಾನೂನು ಸಲಹೆಗಾರ ಮಂಜುನಾಥ್, ಲೋಹಿತ್, ಆತ್ರೆಯ ಕಾಲೇಜಿನ ಡಾಕ್ಟರ್ ಆದಿತ್ಯರವರು, ಕೊಂಗಾಡಿಯಪ್ಪ ಕಾಲೇಜಿನ ಸಮಾಜಕಾರ್ಯ ವಿಭಾಗದ ಪ್ರಶಿಕ್ಷಣಾರ್ಥಿಗಳು, ಹಾಗು ಆತ್ರೇಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.