ಬೆಂಗಳೂರು:- ಡ್ರಂಕ್ & ಡ್ರೈವ್ ತಪಾಸಣೆ ಹೆಸರಿನಲ್ಲಿ ಸುಲಿಗೆ ಆರೋಪ ಕೇಳಿ ಬಂದಿದ್ದು, ಟ್ವೀಟ್ ಮೂಲಕ ಕಮಿಷನರ್ಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಮೊನ್ನೆ ರಾತ್ರಿ 11 ಗಂಟೆ ಸುಮಾರಿಗೆ ಮಹಿಳೆ ಬೈಕ್ನಲ್ಲಿ ಬರುತ್ತಿದ್ದ ವೇಳೆ ತಪಾಸಣೆ ಮಾಡದೆಯೇ ಪೊಲೀಸರಿಂದ ಹಣಕ್ಕೆ ಬೇಡಿಕೆ ಜೊತೆಗೆ ಕುಡಿದು ವಾಹನ ಚಾಲನೆ ಮಾಡ್ತಿದ್ದೀರಾ ಎಂದು ಹೆದರಿಸಿದ್ದಾರೆ. ಮೊದಲಿಗೆ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಟ್ರಾಫಿಕ್ ಪೊಲೀಸರು, ನಂತರ ಗೂಗಲ್ ಪೇ ಮೂಲಕ 5 ಸಾವಿರ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಮಹಿಳೆಯ ತಂದೆ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.