ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ನ(WPL) ಉದ್ಘಾಟನಾ ಸಮಾರಂಭದಲ್ಲಿ ನಟ ಕಾರ್ತಿಕ್ ಆರ್ಯನ್ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಹಿಟ್ ಚಿತ್ರ ‘ಭೂಲ್ ಭುಲೈಯ್ಯಾ 2’ರ ‘ಹರೇ ರಾಮ್’ ಹಾಡು ಸೇರಿದಂತೆ ಅನೇಕ ಹಾಡುಗಳಿಗೆ ಪ್ರದರ್ಶನ ನೀಡಿದರು. ಬಾಲಿವುಡ್ ನಟರಾದ ಶಾರುಖ್ ಖಾನ್, ಶಾಹಿದ್ ಕಪೂರ್, ವರುಣ್ ಧವನ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಹಲವು ತಾರೆಯರು ಕೂಡ ಭಾಗಿಯಾಗಿ ನೃತ್ಯ ಪ್ರದರ್ಶನ ನೀಡಿದರು.
ನಂತರ ನಗರದಲ್ಲಿ ನಡೆದ ಕಾರ್ತಿಕ್ ಆರ್ಯನ್ ಬೆಂಗಳೂರು ರೌಂಡ್ಸ್ ಹೊಡೆದಿದ್ದು, ಫೋಟೋಗಳನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಫೆಬ್ರವರಿ 24ರಂದು ‘ಸತ್ಯಪ್ರೇಮ್ ಕಿ ಕಥಾ’ ಸಿನಿಮಾ ನಟರೂ ಆಗಿರುವ ಕಾರ್ತಿಕ್ ಆರ್ಯನ್ ಬೆಂಗಳೂರಿನ ‘ದಿ ರಾಮೇಶ್ವರಂ ಕೆಫೆ’ಗೆ ಭೇಟಿ ಕೊಟ್ಟರು.
ಈ ಸಂದರ್ಭದಲ್ಲಿ ಕಾಫಿ ಕುಡಿದು ದೋಸೆ ಸವಿದಿದ್ದಾರೆ. ಅಲ್ಲದೇ ‘ಐದು ಫಿಲ್ಟರ್ ಕಾಫಿ ಕೊಡಿ’ ಎಂದು ಕನ್ನಡ ಮಾತನಾಡುವ ಪ್ರಯತ್ನವನ್ನೂ ಮಾಡಿದರು. ಈ ಒಂದು ಪೋಸ್ಟ್ನಲ್ಲಿ 9 ಫೋಟೋ, ವಿಡಿಯೋಗಳಿದ್ದು ಎರಡು ಹೋಟೆಲ್ಗಳಗೆ ಭೇಟಿ ಕೊಟ್ಟಂತಿದೆ. ಇತರೆ ಫೋಟೋಗಳಲ್ಲಿ ವೆಜ್ ಥಾಲಿ ಸೇರಿದಂತೆ ಇತರೆ ಖಾದ್ಯಗಳ ರುಚಿಯುಂಡು ಸಂಭ್ರಮಿಸಿದ್ದಾರೆ.