ಬೆಂಗಳೂರು: ಕರ್ನಾಟಕದಲ್ಲಿ ಹೊಸ ಮಾಡೆಲ್ ಜಾರಿ ಮಾಡಿರುವ ಬಗ್ಗೆ ಬಿಜೆಪಿ ವರಿಷ್ಠರು,ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.ಹೆಚ್ಡಿಕೆ ಈಗಾಗಲೇ ಓಕೆ ಎಂದಿದ್ದು,ಕಾಂಗ್ರೆಸ್ ನಾಯಕರಿಗೆ ಟಕ್ಕರ್ ಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.ಹಾಗಾದ್ರೆ, ಹೊಸ ಮಾಡೆಲ್ ಜಾರಿ ಮಾಡುವ ಕ್ಷೇತ್ರಗಳು ಯಾವ್ಯಾವ್ ಅನ್ನೋದನ್ನ ನೋಡೋದಾದ್ರೆ,
ಸದ್ಯ ಮೂರು ಕ್ಷೇತ್ತಗಳಲ್ಲಿ ಬಿಜೆಪಿ ಹಾಲಿ ಸಂಸದರಿದ್ದರೂ,ಆಡಳಿತ ವಿರೋಧಿ ಅಲೆ ಇದೆ.ಬಿಜೆಪಿ ಪಕ್ಷದ ಕಾರ್ಯಕರ್ತರೇ ಹಾಲಿ ಸಂಸದರ ವಿರುದ್ಧ ತಿರುಗಿಬಿದ್ದಿದ್ದಾರೆ.ಈ ಹಿನ್ನಲೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ,ಹೆಚ್ಡಿಕೆ ಅತ್ಯಾಪ್ತ ಮಾಜಿ ಸಚಿವ ಸಾ.ರಾ.ಮಹೇಶ್ ಗೆ ಬಿಜೆಪಿ ಚಿಹ್ನೆ ಅಡಿ ಕಣಕ್ಕೆ ಇಳಿಸಲು ತೀರ್ಮಾನವಾಗಿದೆ.ಇನ್ನು ಬೆಂಗಳೂರು ಗ್ರಾಮಾಂತರದಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಅಳಿಯ ಡಾ.ಮಂಜುನಾಥ್ ಗೆ ಬಿಜೆಪಿ ಚಿಹ್ನೆಯಡಿ ಕಣಕ್ಕೆ ಇಳಿಸಲು ನಿರ್ಧಾರವಾಗಿದೆ.
ಇನ್ನು ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷ ಚಿಹ್ನೆಯಡಿ ಮಾಜಿ ಸಚಿವ ವಿ.ಸೋಮಣ್ಣ ಅವ್ರನ್ನ ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತಿಸಿದ್ದಾರೆ.ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಪ್ರತಾಪ್ ಸಿಂಹ,ಬೆಂಗಳೂರು ಉತ್ತರದಿಂದ ಶೋಭಾ ಕರಂದ್ಲಾಜೆ ಟಿಕೆಟ್ ಕೊಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗಿದೆ.