ಲಂಡನ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ವಿಚಾರದಲ್ಲಿ ಆಗಾಗ್ಗೆ ಮೂಗು ತೂರಿಸುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಪಾಕ್ ಮೂಲದ ಹೋರಾಟಗಾರ್ತಿ ಮಲಾಲಾ ಯೂಸುಫ್ಝಾಗೆ ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ಯಾನಾ ಮೀರ್ (Yana Mir) ಬ್ರಿಟನ್ ಸಂಸತ್ನಲ್ಲಿ ತಿರುಗೇಟು ನೀಡಿದ್ದಾರೆ.
ನಾನು ಮಲಾಲಾ (Malala Yousafzai) ರೀತಿ ಅಲ್ಲ, ಭಾರತದ ಭಾಗವಾಗಿರುವ ನನ್ನ ತಾಯ್ನಾಡು ಕಾಶ್ಮೀರದಲ್ಲಿ ಸುರಕ್ಷಿತ ಮತ್ತು ಸ್ವತಂತ್ರವಾಗಿದ್ದೇನೆ. ನಾನು ನನ್ನ ದೇಶವನ್ನು ತೊರೆಯಲ್ಲ. ಅಲ್ಲಿ ಶಾಂತಿ ನೆಲೆಸಿದೆ, ಮಾನವಹಕ್ಕುಗಳ ರಕ್ಷಣೆ ಆಗ್ತಿದೆ ಎಂದು ಯಾನಾ ಮೀರ್ ಭಾರತವನ್ನು ಹಾಡಿಹೊಗಳಿದ್ದಾರೆ.
ಜಾಗತಿಕವಾಗಿ ಯಾರೇ ಆಗಲಿ ನನ್ನ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ಸಹಿಸಲ್ಲ. ಸೋಶಿಯಲ್ ಮೀಡಿಯಾದಲ್ಲಿಯೂ ನನ್ನ ಮಾತೃಭೂಮಿ ಬಗ್ಗೆ ಕೆಟ್ಟದಾಗಿ ಮಾತಾಡೋದನ್ನು ಸಹಿಸಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಯಾನಾ ಮೀರ್ ಅವರು ಬ್ರಿಟನ್ ಸಂಸತ್ನಲ್ಲಿ ಮಾತನಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಕೋಟಿ ಕೋಟಿ ಭಾರತೀಯರು ಯಾನ ಮೀರ್ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರಕ್ಕೆ ಭೇಟಿ ಕೊಡದೇ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆ ಮಾಡುವವರನ್ನು ನಾನು ವಿರೋಧಿಸುತ್ತೇನೆ. ಧರ್ಮದ ಆಧಾರದಲ್ಲಿ ಭಾರತೀಯರನ್ನು ಧ್ರುವೀಕರಿಸುವುದನ್ನ ಮೊದಲು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.