ಬೆಂಗಳೂರು: ನಮ್ಮ ಮೆಟ್ರೋ ಅಂತಾ ಬಂದಾಗ ಒಂದಲ್ಲ ಒಂದು ವಿಷಯದಲ್ಲಿ ಸಮಸ್ಯೆಗಳನ್ನೇ ತಂದೊಡ್ಡುತ್ತಿದ್ದು ಇದೀಗ ರೈತನಿಗೆ ಅಪಮಾನ ಮಾಡಿದ್ದರ ಬಗ್ಗೆ ತೀವ್ರ ಆಕ್ರೋಶ ಉಂಟಾಗಿದೆ. ಮೂಟೆ ಹೊತ್ತುಕೊಂಡಿದ್ದ ರೈತನೋರ್ವ ಹಳೆಯ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ಒಳಗೆ ಬಿಟ್ಟಿಲ್ಲವೆಂಬ ಘಟನೆ ನಡೆದಿದ್ದು ರಾಜಾಜಿನಗರ ಮೆಟ್ರೋ ಸ್ಟೇಷನ್ ನಲ್ಲಿ ಕಂಡು ಬಂದಿದೆ.
ರೈತನನ್ನೇ ಕಡೆಗಣಿಸಿದ್ದ ಮೆಟ್ರೋ ಸಿಬ್ಬಂದಿ ಮಾನವೀಯತೆಯನ್ನೇ ಮರೆತ್ರಾ ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನ ಟಿಪ್ ಟಾಪ್ ಆಗಿ ಡ್ರೆಸ್ ಹಾಕೊಂಡ್ರೆ ಮಾತ್ರನಾ ಮೆಟ್ರೊದೊಳಗೆ ಎಂಟ್ರಿನಾ ಎಂದು ಈಗ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಟ್ಟೆ ಕ್ಲೀನ್ ಯಿಲ್ಲ ಅಂತ ರೈತನನ್ನ ಮೆಟ್ರೋ ಒಳಗೆ ಬಿಡದ ಬಿಎಂಆರ್ಸಿಎಲ್ ಸಿಬ್ಬಂದಿ. ಬಡ ರೈತನ ಮೇಲೆ ಸಿಬ್ಬಂದಿಯ ದುರಾಹಂಕಾರದ ವರ್ತನೆ ಬಗ್ಗೆ ಸಹ ಪ್ರಯಾಣಿಕನ ಮೊಬೈಲ್ನಲ್ಲಿ ಸೆರೆಯಾಗಿದ್ದು ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರ ಕಿಡಿ ಕಾರಿದ್ದಾರೆ.
ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಅಂತ ಒಳಗೆ ಬಿಡ್ತಿಲ್ಲ ಅಂತ ಆಕ್ರೋಶ ವ್ಯಕ್ತವಾಗಿದ್ದು ಕೊನೆಗೆ ಸಿಬ್ಬಂದಿಗೆ ಕ್ಯಾರೇ ಮಾಡದೇ ಕರೆದುಕೊಂಡು ಹೋದ ಸಹ ಪ್ರಯಾಣಿಕ
ಸಿಬ್ಬಂದಿ ಅತಿರೇಕದ ವರ್ತನೆಯ ವಿಡಿಯೋ ಎಕ್ಸ್ ನಲ್ಲಿ ಶೇರ್ ಮಾಡಿದ್ದು ಬಿಎಂಆರ್ ಸಿಎಲ್ ಗೆ ಟ್ಯಾಗ್ ಮಾಡಿ ವಿಐಪಿಗಳಿಗೆ ಮಾತ್ರನಾ ಮೆಟ್ರೋ ಅಂತ ಕಿಡಿ ಕಾರಲಾಗಿದೆ ಸಿಬ್ಬಂದಿಯ ಈ ವರ್ತನೆ ವಿರುದ್ಧ ಕ್ರಮಕ್ಕೆ ಎಕ್ಸ್ ನಲ್ಲಿ ಸಾಕಷ್ಟು ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾಗುತ್ತಿದ್ದು ಮೆಟ್ರೋ ಕೇವಲ ವಿಐಪಿಗಳಿಗಾ ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ. ಇದಕ್ಕೆಲ್ಲಾ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು .