ಬೆಂಗಳೂರು : ನಾನು ಯಾವುದೇ ಕಾರಣಕ್ಕೂ ಪಕ್ಷೇತರವಾಗಿ ನಿಲ್ಲುವುದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಘೋಷಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬೆಂಬಲಿಗರು ಮಂಡ್ಯವನ್ನ ಬಿಟ್ಟು ಬೇರೆ ಕಡೆ ಹೋಗಬೇಡಿ ಅಂತ ಹೇಳಿದ್ದಾರೆ ಎಂದು ಹೇಳಿದರು.
ಸಂಸದೆಯಾಗಿ 5 ವರ್ಷದ ಜರ್ನಿ ಕೊನೆಯಾಗುತ್ತಿದೆ. ಅದರ ಬಗ್ಗೆ ಇವತ್ತು ಚರ್ಚೆ ಆಯ್ತು. ನಾವೆಲ್ಲ ಜೊತೆಗಿದ್ದೇವೆ ಅಂತ ಬೆಂಬಲಿಗರು ಹೇಳಿದ್ದಾರೆ. ಇಂಡವಾಳು ಸಚ್ಚಿದಾನಂದ ಯಾವಾಗಲೂ ನಮ್ಮ ಜೊತೆಯಲ್ಲಿ ಇದಾರೆ. ಚುನಾವಣೆ ಬಂದ ಮೇಲೆ ತುಂಬಾ ಊಹಾಪೋಹಗಳು ಹೆಚ್ಚಾಗುತ್ತಿದೆ. ಪ್ರತಿಯೊಂದು ದಿನ ನಾವು ಕ್ಲಾರಿಟಿ ಕೊಡೋಕೆ ಆಗಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.
ಮಂಡ್ಯದಲ್ಲಿ ಬಿಜೆಪಿಗೆ ತುಂಬಾ ಸಪೋರ್ಟ್ ಇದೆ. ಇವತ್ತು ಎಲ್ಲಾ ಬೆಂಬಲಿಗರು ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ. ಬಿಜೆಪಿಯಿಂದ ನೀವು ನಿಂತುಕೊಳ್ಳಿ ಎಂದಿದ್ದಾರೆ. ನಾವು ನಿಮಗೆ ಸಪೋರ್ಟ್ ಮಾಡ್ತೀವಿ ಎಂದಿದ್ದಾರೆ. ನಾವೂ ಮಂಡ್ಯ ಭಾಗದಲ್ಲಿ ಬಿಜೆಪಿಯನ್ನು ಪ್ರಬಲವಾಗಿ ಬೆಳಸಬೇಕು. ಹೈಕಮಾಂಡ್ ಟಿಕೆಟ್ ವಿಚಾರವಾಗಿ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.