ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲ್ಲಿಸಲು ದೋಸ್ತಿಗಳ ಕಾರ್ಯತಂತ್ರ ನಡೆದಿದ್ದು ಮತಗಳನ್ನು ಸೆಳೆಯಲು ಅಖಾಡಕ್ಕೆ ಇಳಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ನಗರದ ಎಂ ಜಿ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ದೋಸ್ತಿಗಳ ತಂತ್ರಗಾರಿಕೆ ಸಭೆ ನಡೆಸಿದ್ದು ರಾಜ್ಯಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲ್ಲಿಸಲು ಏನು ಮಾಡಬೇಕು ಕಾಂಗ್ರೆಸ್ ಗೆ ಯಾವ ರೀತಿ ಠಕ್ಕರ್ ಕೊಡಬೇಕೆಂದೆಲ್ಲಾ ರ್ಚೆ ನಡೆದಿದೆ.
ಈ ವೇಳೆ ಕುಮಾರಸ್ವಾಮಿ, ವಿಜಯೇಂದ್ರ, ಅಶೋಕ್ ಸೇರಿ ಕೆಲ ನಾಯಕರು ಭಾಗಿಯಾಗಿದ್ದು ಸಭೆಯಲ್ಲಿ ದೋಸ್ತಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉಪಸ್ಥಿತರಿದ್ದರು
ಆ ನಂತರ ಸಭೆ ಮುಗಿದ ಬಳಿಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ, ಊಟಕ್ಕೆ ಬಂದಿದ್ದೊ ಊಟ ಮಾಡಿದ್ದೀವಿ ಹೋಗ್ತಿದ್ದೀವಿ ನಮ್ಮ ಮತವನ್ನು ಯಾವ ರೀತಿ ಹಾಕಬೇಕು ಅಂತ ಒಂದು ಸಣ್ಣ ಚರ್ಚೆ ಅಷ್ಟೇ… ಊಟ ಮುಗಿಸುಕೊಂಡು ಹೋಗ್ತಿದ್ದೀವಿ ಅಷ್ಟೇ, ಬೇರೇನು ಇಲ್ಲ ಎಂದರು. ಹಾಗೆ ಕುಪೇಂದ್ರ ರೆಡ್ಡಿ ಗೆಲ್ತಾರಾ ಎಂಬ ಪ್ರಶ್ನೆಗೆ ನೋಡೋಣ ನಾಳೆ ಗೊತ್ತಾಗುತ್ತೆ ಎಂದು ಹೇಳಿ ಹೊರಟು ಹೋದರು.
ನಾಳೆ 9 ಗಂಟೆಯಿಂದ ಮತದಾನ ಆರಂಭ ಆಗುತ್ತದೆ ಸಂಜೆ 4 ಗಂಟೆಯವರೆಗೆ ಮತದಾನ ನಡೆಯುತ್ತೆ ಭದ್ರತೆಯನ್ನು ಎಲ್ಲಾ ರೀತಿಯಲ್ಲಿ ಕೈಗೊಳ್ಳಲಾಗಿದೆ ಮತದಾನ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ 5 ಪಕ್ಷಗಳು ಇವೆ ಅವುಗಳಿಗೆ ಕೇಂದ್ರಗಳನ್ನ ಮಾಡಿದ್ದೇವೆ 5 ಗಂಟೆ ಒಳಗೆ ಅವರು ಕೊಟ್ರೆ ಕೌಟಿಂಗ್ ಆರಂಭ ಆಗುತ್ತದೆ
ಇಬ್ಬರು ಇಂಡಿಪೆಂಡೆಂಟ್ ಅವರು ಯಾವುದೇ ಏಜೆಂಟ್ ಗಳಿಗೆ ತೊರಿಸಿ ಮತವನ್ನು ಹಾಕಬೇಕಾಗಿಲ್ಲ ಉಳಿದವರು ಅವರ ಪಕ್ಷದ ಏಜೆಂಟ್ ಗಳಿಗೆ ತೋರಿಸಿ ಮತವನ್ನು ಹಾಕಬೇಕು ಅವರು ಏಜೆಂಟ್ ಗಳಿಗೆ ತೊರಸಿಲಿಲ್ಲ ಅಂದ್ರೆ ಅದು ಅನ್ ವ್ಯಾಲಿಡ್ ಆಗುತ್ತದೆಒಟ್ಟು 223 ಮತದಾರರು ಇದ್ದಾರೆ