ದಿನವಿಡಿ ಅತಿಯಾದ ಓಡಾಟ, ದೇಹವು ಬಳಲಿ ಬೆಂಡಾಗುವಷ್ಟು ಕೆಲಸವಿದ್ದರೆ, ಆಗ ಸಂಜೆಯಾಗುತ್ತಿ ರುವಂತೆ ಕಾಲುಗಳು ನೋಯಲು, ಸ್ನಾಯುಗಳಲ್ಲಿ ಸೆಳೆತ ಇತ್ಯಾದಿ ಕಂಡುಬರುವುದು. ಕಠಿಣ ಕ್ರೀಡೆಗಳನ್ನು ಆಡುವ ಕಾರಣದಿಂದಲೂ ಕಾಲುಗಳು ತುಂಬಾ ಬಳಲಿದಂತೆ ಆಗುವುದು. ಪೋಷಕಾಂಶಗಳ ಕೊರತೆ,
ಅನಾರೋಗ್ಯವು ಇದಕ್ಕೆ ಕಾರಣವಾಗಿರಬಹುದು. ಇದಕ್ಕಾಗಿ ನೀವು ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡರೆ, ಆಗ ಅದು ಖಂಡಿತವಾಗಿಯೂ ಸಮಸ್ಯೆಯನ್ನು ನಿವಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಅಂತಹ ಕೆಲವು ಮನೆಮದ್ದುಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ
ಬಿಸಿ ನೀರು
- ರಕ್ತನಾಳಗಳು ಸರಿಯಾಗಿ ಕೆಲಸ ಮಾಡದೆ, ರಕ್ತವು ಜಮೆಯಾದ ವೇಳೆ ಸೆಳೆತವು ಕಂಡುಬರುವುದು. ಇದಕ್ಕೆ ಬಿಸಿ ನೀರಿನ ಶಾಖ ನೀಡಿದರೆ ಅದರಿಂದ ಕಾಲುಗಳಲ್ಲಿ ರಕ್ತ ಸಂಚಾರವು ಸರಿಯಾಗಿ ಆಗುವುದು ಹಾಗೂ ಸ್ನಾಯುಗಳಿಗೆ ಆರಾಮ ಸಿಗುವುದು.
- ಬಿಸಿ ನೀರಿನಲ್ಲಿ ಟವೆಲ್ ನ್ನು ಅದ್ದಿಕೊಂಡು ಅದನ್ನು ಕಾಲುಗಳ ಭಾಗದಲ್ಲಿ ಇಟ್ಟುಬಿಡಿ. ಹಲವಾರು ಸಲ ನೀವು ಇದನ್ನು ಮಾಡಬೇಕು.
ಸಾರಭೂತ ತೈಲ
- ನೀಲಗಿರಿ ಎಣ್ಣೆಯು ಸ್ನಾಯುಗಳಿಗೆ ಶಮನ ನೀಡುವುದು ಮತ್ತು ಉರಿಯೂತ ಹಾಗೂ ನೋವನ್ನು ಕಡಿಮೆ ಮಾಡುವುದು. ಲವಂಗದ ಎಣ್ಣೆಯಲ್ಲಿ ಕೂಡ ಉರಿಯೂತ ಶಮನಕಾರಿ ಗುಣವು ಇದ್ದು, ಇದು ಬಳಲಿಕೆ ಮತ್ತು ಕಾಲು ನೋವು ಕಡಿಮೆ ಮಾಡುವುದು.
- ಬಿಸಿ ನೀರಿಗೆ ಯಾವುದಾದರೂ ಸಾರಭೂತ ತೈಲವನ್ನು ಹಾಕಿ ಅದರಲ್ಲಿ 15 ನಿಮಿಷ ಕಾಲ ಕಾಲುಗಳನ್ನು ಅದ್ದಿಟ್ಟು ಕೊಳ್ಳಬೇಕು. ಇದರ ಬಳಿಕ ಪಾದಗಳನ್ನು ತಣ್ಣೀರಿನಿಂದ ತೊಳೆಯಿರಿ.
ಕಲ್ಲುಪ್ಪು
- ಬಿಸಿ ನೀರಿನಲ್ಲಿ ಒಂದು ಚಮಚ ಕಲ್ಲುಪ್ಪು ಮತ್ತು ಒಂದು ಚಮಚ ಅಡುಗೆ ಸೋಡಾವನ್ನು ಹಾಕಿ ಮತ್ತು ಇದರಲ್ಲಿ 15 ನಿಮಿಷ ಕಾಲ ಕಾಲುಗಳನ್ನು ಅದ್ದಿಟ್ಟುಕೊಳ್ಳಿ.
- ಕಲ್ಲುಪ್ಪು ದೇಹವನ್ನು ನಿರ್ವಿಷಗೊಳಿಸುವುದು ಮತ್ತು ಸ್ನಾಯುಗಳಿಗೆ ಆರಾಮ ನೀಡುವುದು. ಅಡುಗೆ ಸೋಡಾವು ಉರಿಯೂತ ಶಮನಕಾರಿ ಗುಣ ಹೊಂದಿದೆ ಮತ್ತು ಇದು ಬಳಲಿಕೆ ದೂರ ಮಾಡುವುದು.
ಆಪಲ್ ಸೀಡರ್ ವಿನೇಗರ್
- ಕಾಲು ನೋವು ಉಂಟು ಮಾಡುವಂತಹ ಬ್ಯಾಕ್ಟೀರಿಯಾವನ್ನು ದೂರ ಮಾಡುವಂತಹ ಗುಣವು ಆಪಲ್ ಸೀಡರ್ ವಿನೇಗರ್ ನಲ್ಲಿದೆ.
- ಬಿಸಿ ನೀರಿಗೆ ಒಂದರ್ಧ ಕಪ್ ಆಪಲ್ ಸೀಡರ್ ವಿನೇಗರ್ ಹಾಕಿಕೊಳ್ಳಿ. ಇದರಲ್ಲಿ ಎರಡು ಪಾದಗಳನ್ನು ಇಟ್ಟುಬಿಡಿ. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆಪಲ್ ಸೀಡರ್ ವಿನೇಗರ್ ಹಾಕಿಕೊಂಡು ಕುಡಿದರೆ ತುಂಬಾ ಪರಿಣಾಮಕಾರಿ.
ತಂಪು ಚಿಕಿತ್ಸೆ
- ಇದು ರಕ್ತ ಸಂಚಾರವನ್ನು ಸುಧಾರಣೆ ಮಾಡುವ ಜತೆಗೆ ಉರಿಯೂತ ಮತ್ತು ಊತವನ್ನು ಕಡಿಮೆ ಮಾಡುವುದು. ತಂಪು ಶಾಖವನ್ನು ನಿಮಗೆ ನೋವುಂಟು ಮಾಡುತ್ತಿರುವ ಜಾಗಕ್ಕೆ ಇಟ್ಟುಬಿಡಿ.
- ಇದು ನರಗಳ ಕಾರ್ಯವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು, ಹೀಗಾಗಿ ನೋವು ಕಡಿಮೆ ಆಗುವುದು. ಆದರೆ ಅತಿಯಾಗಿ ತಂಪು ಒತ್ತಡವನ್ನು ಹಾಕಬೇಡಿ.
ಪುದೀನಾ ಚಹಾ
- ಪುದೀನಾ ಚಹಾದ ಟೀ ಬ್ಯಾಗ್ ಗಳನ್ನು 4-5 ನಿಮಿಷ ಕಾಲ ಬಿಸಿ ನೀರಿಗೆ ಹಾಕಿ. ಈ ಗಿಡಮೂಲಿಕೆ ಚಹಾವನ್ನು ಟಬ್ ಗೆ ಹಾಕಿಕೊಂಡು ಅದರಲ್ಲಿ ಪಾದಗಳನ್ನು ಅದ್ದಿಟ್ಟುಕೊಳ್ಳಿ.
- 15 ನಿಮಿಷ ಕಾಲ ಹೀಗೆ ಮಾಡಿದರೆ, ಆಗ ಒಳ್ಳೆಯ ಪರಿಹಾರ ಸಿಗುವುದು. ಪುದೀನಾದಲ್ಲಿ ನೋವು ನಿವಾರಕ ಗುಣವು ಇದೆ ಹಾಗೂ ಇದು ಕಾಲು ನೋವಿಗೆ ಒಳ್ಳೆಯ ಮನೆಮದ್ದು.
ಮೆಂತ್ಯೆ ನೀರು
ಒಂದು ಚಮಚ ಮೆಂತ್ಯೆಯನ್ನು ಎರಡು ಲೋಟ ನೀರಿನಲ್ಲಿ ರಾತ್ರಿ ಹಾಖಿಡಿ. ಇದರ ಬಳಿಕ ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡಿ. ಇದರಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ನೋವು ನಿವಾರಣೆ ಮಾಡುವುದು.
ವಿಟಮಿನ್ ಡಿ ಆಹಾರಗಳು
- ದೇಹದಲ್ಲಿ ವಿಟಮಿನ್ ಡಿ ಕೊರತೆಯು ಇದ್ದರೆ ಆಗ ಸ್ನಾಯುಗಳಲ್ಲಿ ಅತಿಯಾಗಿ ನೋವು ಕಂಡುಬರುವುದು. ಇದಕ್ಕಾಗಿ ವಿಟಮಿನ್ ಡಿ ಇರುವಂತಹ ಆಹಾರ ಸೇವನೆ ಮಾಡಿ ಮತ್ತು ಬಿಸಿಲಿಗೆ ಓಡಾಡಬೇಕು.
- ವಿಟಮಿನ್ ಡಿ ಇರುವ ಕೆಲವು ಆಹಾರಗಳೆಂದರೆ ಸಾಲ್ಮನ್, ಕೆಂಪು ಮಾಮಸ, ಮೊಟ್ಟೆಯ ಲೋಳೆ, ಮಶ್ರೂಮ್, ಸೋಯಾ ಹಾಲು ಮತ್ತು ಓಟ್ ಮೀಲ್.
ಬಿಸಿ ನೀರಿನ ಸ್ನಾನ ಅದ್ಭುತ ಪರಿಹಾರ
- ಒಂದು ವೇಳೆ ನಿಮ್ಮ ಕಾಲಿಗೆ ಪೆಟ್ಟು ಬಿದ್ದು ಕಾಲು ಊದಿಕೊಂಡು ನೋವು ಕಂಡು ಬರುತ್ತಿದ್ದರೆ,
- ಉಗುರು ಬೆಚ್ಚಗಿನ ನೀರಿನ ಸ್ನಾನ ಮಾಡಿ ನೋವಿರುವ ಕಾಲಿನ ಭಾಗದಲ್ಲಿ ರಕ್ತಸಂಚಾರವನ್ನು ಹೆಚ್ಚು ಮಾಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.
- ಒಂದು ವೇಳೆ ನಿಮಗೆ ಬಿಸಿ ನೀರು ಸ್ನಾನ ಮಾಡಲು ಈ ಸಮಯದಲ್ಲಿ ಅನುಕೂಲವಿಲ್ಲದೆ ಹೋದರೆ ಒಂದು ಬಟ್ಟೆಯನ್ನು ಉಂಡೆ ಮಾಡಿ ಅದನ್ನು ಸುಡುವ ಬಿಸಿ ನೀರಿನಲ್ಲಿ ಅದ್ದಿ ನೋವಿರುವ ಜಾಗದಲ್ಲಿ ಇಟ್ಟುಕೊಳ್ಳುತ್ತಾ ಬನ್ನಿ.
- ಇದರಿಂದ ಮಾಂಸಖಂಡಗಳ ಭಾಗದಲ್ಲಿರುವ ರಕ್ತನಾಳಗಳು ವಿಶ್ರಾಂತ ಗೊಂಡು ರಕ್ತ ಸಂಚಾರ ಹೆಚ್ಚಾಗಿ ಕಾಲಿನ ನೋವು ವಾಸಿಯಾಗುತ್ತದೆ.