ಬೆಂಗಳೂರಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ..ಕಳ್ಳರ ಕಾಟಕ್ಕೆ ಜನ ಫೋನ್ ನಲ್ಲಿ ಮಾತಾಡೋಕು ಹೆದರೊ ಪರಿಸ್ಥಿತಿ ನಿರ್ಮಾಣ ಆಗಿದೆ..ಬೈಕ್ ನಲ್ಲಿ ಬರೊ ಆಸಾಮಿಗಳು ಕ್ಷಣ ಮಾತ್ರದಲ್ಲಿ ಮೊಬೈಲ್ ಕಸಿದು ಪರಾರಿ ಆಗ್ತಿದ್ದಾರೆ..ಇದು ಒಂದು ಕಡೆ ಆದ್ರೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿರುವ ಮೊಬೈಲ್ ಕದ್ದು ಹಣ ದೋಚ್ತಿದ್ದ ಖದೀಮ ಕೂಡ ಲಾಕ್ ಆಗಿದ್ದಾನೆ
ರಸ್ತೆಯಲ್ಲಿ ಮೊಬೈಲ್ ಹಿಡಿದು ನಿಂತ್ರೆ ನಿಮ್ಮ ಮೊಬೈಲ್ ನಿಮ್ಮ ಕೈನಲ್ಲಿ ಇರೋದೆ ಇಲ್ಲ..ಕ್ಷಣಮಾತ್ರದಲ್ಲಿ ಕಂಡವರ ಪಾಲಾಗಿಬಿಡತ್ತೆ…ಇಲ್ಲಾಗಿರೋದು ಕೂಡ ಅದೇ..ನೋಡಿ ರಸ್ತೆ ಬದಿ ಮೊಬೈಲ್ ಹಿಡಿದು ನಿಂತಿದ್ದ ವ್ಯಕ್ತಿಯ ಮೊಬೈಲ್ ಅನ್ನು ಬೈಕ್ ನಲ್ಲಿ ಬರೊ ಆಸಾಮಿಗಳು ಅದ್ಹೇಗೆ ಕಿತ್ತು ಪರಾರಿ ಆಗ್ತಾರೆ ಅಂತಾ..ಇಂತಹ ಗ್ಯಾಂಗ್ ಬೆಂಗಳೂರಿನಾದ್ಯಂತ ಆ್ಯಕ್ಟಿವ್ ಆಗಿದ್ದ ಸಾರ್ವಜನಿಕರು ಭಯದಲ್ಲೇ ಮೊಬೈಲ್ ಹಿಡಿದು ಓಡಾಡೊ ಪರಿಸ್ಥಿತಿ ನಿರ್ಮಾಣ ಆಗಿದೆ.
ಹೌದು ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು..ರಂಗನಾಥ್ ಮತ್ತು ಗಿರೀಶ್…ಇವ್ರು ಸಾಮಾನ್ಯದವ್ರಲ್ಲ..ಮೊಬೈಲ್ ನಲ್ಲಿ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ರೌಂಡ್ಸ್ ಹಾಕ್ತಾರೆ…ರಸ್ತೆ ಬದಿಯಲ್ಲಿ ಮೊಬೈಲ್ ಕೈನಲ್ಲಿ ಹಿಡಿದು ನಿಂತಿರೋರನ್ನೆ ಟಾರ್ಗೆಟ್ ಮಾಡ್ತಾರೆ..ಅವ್ರ ಗಮನ ಸ್ವಲ್ಪ ಅತ್ತ ಇತ್ತ ಹೋದ್ರೆ ಸಾಕು..ಕೈನಲ್ಲಿದ್ದ ಮೊಬೈಲ್ ಕಸಿದು ಪರಾರಿ ಆಗ್ತಿದ್ರು..ಸದ್ಯ ಅದೇ ಖದೀಮರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ..ಬಂಧಿತರಿಂದ 20 ಲಕ್ಷ ಮೌಲ್ಯದ 68 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ
ಇನ್ನು ಮೊಬೈಲ್ ಕಸಿದು ಪರಾರಿ ಆಗೋರ ಕಥೆ ಇದಾದ್ರೆ..ಮಹಿಳೆಯರ ವ್ಯಾನಿಟಿ ಬ್ಯಾಗ್ ನಿಂದ ಮೊಬೈಲ್ ಕದ್ದು ಅವರ ಖಾತೆಯಲ್ಲಿರುವ ಹಣವನ್ನ ವರ್ಗಾವಣೆ ಮಾಡಿಕೊಳ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ..
ಹೌದು..ರಾಮಮೂರ್ತಿನಗರ ಪೊಲೀಸರು ವಿಘ್ನೇಶ್ ಎಂಬ ಮೊಬೈಲ್ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ.ಬಂಧಿತನಿಂದ 8 ಲಕ್ಷ ಮೌಲ್ಯದ 38 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ..ಆರೋಪಿಯು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಹೊಂಚು ಹಾಕಿ ನಿಲ್ತಿದ್ದ.ಬಸ್ ಹತ್ತುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹಿಂದಿನಿಂದ ಬಸ್ ಹತ್ತುವ ನೆಪದಲ್ಲಿ ವ್ಯಾನಿಟಿ ಬ್ಯಾಗ್ ನ ಜಿಪ್ ತೆಗೆದು ಮೊಬೈಲ್ ಫೋನ್ ಕಳ್ಳತನ ಮಾಡ್ತಿದ್ದ..ಮೊಬೈಲ್ ಫೋನ್ ನಲ್ಲಿ ಇರ್ತಿದ್ದ ಸಿಮ್ ಕಾರ್ಡ್ ಬೇರೊಂದು ಮೊಬೈಲ್ ಫೋನ್ ಗೆ ಹಾಕಿ ಫೋನ್ ಪೇ,ಗೂಗಲ್ಪೇ,ಪಿನ್ ಕೋಡ್ ಬದಲಿಸ್ತಿದ್ದ.ನಂತರ ಅವುಗಳ ಮೂಲಕ ಕಳವು ಮಾಡಿದ್ದ ಮೊಬೈಲ್ ನಂಬರ್ ಲಿಂಕ್ ಹೊಂದಿರುವ ಬ್ಯಾಂಕ್ ಗಳಲ್ಲಿರುವ ಹಣವನ್ನು ಬೇರೊಂದು ಪರಿಚಯಸ್ಥರ ಅಕೌಂಟ್ ಗೆ ವರ್ಗಾವಣೆ ಮಾಡಿ ನಂತರ ಆ ಹಣವನ್ನು ಪಡೆದುಕೊಳ್ತಿದ್ದ.ಸದ್ಯ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ
ಹೀಗೆ ನಗರದಾದ್ಯಂತ ಇಂತಹ ಮೊಬೈಲ್ ಕಳ್ಳರು ಆ್ಯಕ್ಟಿವ್ ಆಗಿದ್ದು..ಹೊಂಚು ಹಾಕಿ ನಿಂತಿದ್ದಾರೆ…ನೀವು ರಸ್ತೆಯಲ್ಲಿ ಮೊಬೈಲ್ ಹಿಡಿದು ಹೋಗೊ ಮುನ್ನ ಎಚ್ಚರ ನಾಳೆ ನಿಮ್ಮ ಮೊಬೈಲ್ ಕೂಡ ಕಂಡವರ ಪಾಲಾಗೋದು ಗ್ಯಾರಂಟಿ