ಬೆಂಗಳೂರು: ರೈತ ಸಮುದಾಯಕ್ಕೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಫೆ. 28 ರ ಇಂದು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 16 ನೇ ಕಂತು ರೈತರ ಖಾತೆಗೆ ಜಮೆ ಆಗಲಿದೆ.
ದೇಶಾದ್ಯಂತ ಬಡ ರೈತರಿಗೆ ಆರ್ಥಿಕ ಪ್ರಯೋಜ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಭಾಗವಾಗಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ನೆರವು ಒದಗಿಸುತ್ತದೆ. ಅಂದರೆ, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನಂತೆ ವಾರ್ಷಿಕ ಮೂರು ಕಂತುಗಳನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಫಲಾನುಭವಿಗಳ ಹೆಸರು ನೋಡುವ ಕ್ರಮ
- ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ: pmkisan.gov.in
- ಮುಖ್ಯಪುಟದ ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ
- ಇಲ್ಲಿ ಆ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಗಮನಿಸಿ. ಅದರಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ಇಕೆವೈಸಿ ಆಗದೇ ಇದ್ದಿರಬಹುದು, ಅಥವಾ ನೀವಿನ್ನೂ ನೊಂದಣಿ ಮಾಡಿಸದೇ ಇರಬಹುದು.
- ಇದೇ ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಇಕೆವೈಸಿ ಮಾಡಲು ಅವಕಾಶ ಸದಾ ಇರುತ್ತದೆ. ಹಾಗೆಯೇ, ಹೊಸದಾಗಿ ನೊಂದಣಿ ಮಾಡಿಸಬೇಕೆಂದರೆ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ, ಎಲ್ಲಾ ಅಗತ್ಯ ವಿವರ ತುಂಬಿ ಸಲ್ಲಿಸಿದರೆ ಯೋಜನೆಗೆ ನೀವು ನೊಂದಾಯಿಸಿಕೊಳ್ಳಬಹುದು.