ಬೆಂಗಳೂರು:- ಸ್ಕೂಲ್ಸ್ ಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ನುಂಗಿ ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕರಿಸಂದ್ರದ ಉರ್ದು ಶಾಲೆಯಲ್ಲಿ ಜರುಗಿದೆ. ನಾಲ್ಕನೇ ತರಗತಿಯ 9 ವರ್ಷದ ‘ಝೋಯಾ’ ಸಾವನ್ನಪ್ಪಿದ ಮಗು ಎನ್ನಲಾಗಿದೆ.
ಶಾಲೆಯಲ್ಲಿ ಕೊಟ್ಟ ಪ್ರೋಟೀನ್ ಮಾತ್ರೆ ತಿನ್ನುತ್ತಿದ್ದಂತೆ ಮಗುವಿನ ಆರೋಗ್ಯದಲ್ಲಿ ಏರು ಪೇರಾಗಿದೆ.
ಮಗುವಿನ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಖಾಸಗೀ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆದರೆ ಚಿಕಿತ್ಸೆ ಫಲಿಸದೇ ಬನಶಂಕರಿಯಲ್ಲಿರುವ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ತಡ ರಾತ್ರಿ ಮಗು ಕೊನೆಯುಸಿರೆಳೆದಿದೆ. ಇನ್ನೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಧ್ಯ ನ್ಯಾಯಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಕುಟುಂಬ ಮುಂದಾಗಿದೆ.