ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಮರಿಯಮ್ ನವಾಜ್ ಅವರ ವೀಡಿಯೊ ಒಂದು ವೈರಲ್ ಆಗಿದೆ.
ಮರಿಯಮ್ ನವಾಜ್ ತನ್ನ ತಂದೆ ನವಾಜ್ ಷರೀಫ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವರದಿಯ ಪ್ರಕಾರ, ಈ ವೀಡಿಯೊ ಪಂಜಾಬ್ ವಿಧಾನಸಭೆಯಲ್ಲಿ ಮರಿಯಮ್ ನವಾಜ್ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದು ನಂತರ ತನ್ನ ತಂದೆಯನ್ನು ಭೇಟಿಯಾಗಲು ಹೋದ ಸಮಯದದ್ದಾಗಿದೆ.
ಪಾಕಿಸ್ತಾನದ ಹಿರಿಯ ಪತ್ರಕರ್ತ ಹಮೀದ್ ಮಿರ್ ಅವರು ಫೆಬ್ರವರಿ 26ರಂದು ಮರಿಯಮ್ ನವಾಜ್ ಅವರ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಈ ಸಂಪ್ರದಾಯ ಯಾವ ಧರ್ಮದಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ.
ಈ ವೀಡಿಯೊದಲ್ಲಿ, ಮರಿಯಮ್ ನವಾಜ್ ತನ್ನ ತಂದೆ ನವಾಜ್ ಷರೀಫ್ ಅವರ ಪಾದಗಳಿಗೆ ನಮಸ್ಕರಿಸುತ್ತಿದ್ದಾರೆ ಮತ್ತು ನವಾಜ್ ಷರೀಫ್ ಕೂಡ ತಮ್ಮ ಮಗಳ ಬೆನ್ನು ತಟ್ಟುವ ಮೂಲಕ ಆಶೀರ್ವದಿಸಿದ್ದಾರೆ.