ಬೆಂಗಳೂರು: ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಸಂಚಾರದ ದಟ್ಟಣೆ ಇರುವ ಎರಡು ಸ್ಥಳಗಳಲ್ಲಿ ಪ್ರಾಯೋಗಿಕ ನಗರ ಸುರಂಗ ಮಾರ್ಗ (Bengaluru Urban Tunnel) ನಿರ್ಮಾಣವಾಗಲಿದೆ. ಇದಕ್ಕಾಗಿ ಬಿಬಿಎಂಪಿ ಬಜೆಟ್ನಲ್ಲಿ 200 ಕೋಟಿ ರೂ.ಗಳ ಸೀಡ್ ಮನಿ ಒದಗಿಸಲಾಗಿದೆ.
ಬಿಬಿಎಂಪಿಯಲ್ಲಿ ಇಂದು ಮಂಡಿಸಿದ ಬಜೆಟ್ನಲ್ಲಿ (BBMP Budget 2024) 2 ಸುರಂಗ ಮಾರ್ಗಗಳ ನಿರ್ಮಾಣ ಕಾರ್ಯದ ಪ್ರಸ್ತಾಪವಿದೆ. ಆದರೆ ಈ ಕಾಮಗಾರಿ ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಬಜೆಟ್ ಭಾಷಣದಲ್ಲಿ ಯಾವುದೇ ಮಾಹಿತಿ ಇಲ್ಲ
ಸಮಗ್ರ ಸಂಚಾರ ಯೋಜನೆ
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸಮಗ್ರವಾಗಿ ಪರಿಶೀಲಿಸಿ, ದೀರ್ಘಾವಧಿ ಪರಿಹಾರ ಕಂಡುಕೊಳ್ಳಲು ಬೆಂಗಳೂರು ನಗರ ಸಮಗ್ರ ಸಂಚಾರ ಯೋಜನೆ [Bengaluru City Comprehensive Mobility Plan (BCCMP)] ಯನ್ನು ರೂಪಿಸಲಾಗುತ್ತಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಸಮಗ್ರವಾಗಿ ಪರಿಶೀಲಿಸಿ, ದೀರ್ಘಾವಧಿ ಪರಿಹಾರ ಕಂಡುಕೊಳ್ಳಲು ಬೆಂಗಳೂರು ನಗರ ಸಮಗ್ರ ಸಂಚಾರ ಯೋಜನೆ [Bengaluru City Comprehensive Mobility Plan (BCCMP)] ಯನ್ನು ರೂಪಿಸಲಾಗುತ್ತಿದೆ.
ಈಗಾಗಲೇ ನಗರ ಸುರಂಗ ಮಾರ್ಗ ಯೋಜನೆಯೂ ಸೇರಿದಂತೆ ವಿವಿಧ ಯೋಜನೆಗಳ ಡಿಪಿಆರ್ ಸಲ್ಲಿಸಲು ಪ್ರಸಿದ್ಧ ಯೋಜನಾ ಸಮಾಲೋಚಕರಿಗೆ ಕಾರ್ಯಾದೇಶ ನೀಡಲಾಗಿದೆ ಎಂದೂ ಇಂದಿನ ಬಜೆಟ್ನಲ್ಲಿ ಮಾಹಿತಿ ನೀಡಲಾಗಿದೆ