ದೃಷ್ಟಿ ಉತ್ತಮವಾಗಿರಬೇಕೆಂದರೆ ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಕಣ್ಣಿನ ಸುರಕ್ಷತೆಗೆ ಮಾಡಬೇಕಾದ ಕೆಲಸಗಳನ್ನು ತಪ್ಪಿಸದೇ ಮಾಡಬೇಕಿದೆ. ಉದಾಹರಣೆಗೆ ನಿರಂತರವಾಗಿ ಕಣ್ಣನ್ನು ಮುಚ್ಚದೆ ನೋಡುವುದನ್ನು ಬಿಟ್ಟು ಆಗಾಗ ಕಣ್ಣು ಮಿಟುಕಿಸುವುದು, ತಣ್ಣನೆಯ ನೀರಿನಿಂದ ತೊಳೆಯುವುದು, ಕಣ್ಣಿಗೆ ಉತ್ತಮವಾಗಿರುವ ಆಹಾರ ಸೇವನೆ ಮಾಡುವುದು ಇತ್ಯಾದಿ.
ತುಪ್ಪದ ಸೇವನೆ ಅಥವಾ ಹೊರಗಿನಿಂದ ಹಚ್ಚುವುದು ಎರಡೂ ವಿಧಾನಗಳೂ ಕೂಡ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಕಣ್ಣುರೆಪ್ಪೆಗಳು, ಕಣ್ಣುಗಳ ಕೆಳಗೆ ಮತ್ತು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಶುದ್ಧ ಹಸುವಿನ ತುಪ್ಪವನ್ನು ನಿಧಾನವಾಗಿ ಮಸಾಜ್ ಮಾಡಿ, ಇದು ಕಣ್ಣಿನ ಸುತ್ತಲಿನ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ನಿವಾರಿಸುತ್ತದೆ. ಅಲ್ಲದೆ ಇದು ತಾಜಾ ಚರ್ಮದ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ನೆಲ್ಲಿಕಾಯಿಗಳನ್ನು ನೇರವಾಗಿ ಅಥವಾ ಆಹಾರದ ರೂಪದಲ್ಲಿ ಪ್ರತಿನಿತ್ಯ ಸೇವಿಸಿ. ಇದರಿಂದಲೂ ಕಣ್ಣಿನ ಸಮಸ್ಯೆಗಳು ನಿಮ್ಮ ಸಮೀಪ ಸುಳಿಯುವುದಿಲ್ಲ.
ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಗಜ್ಜರಿ ಅಥವಾ ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು. ಆದರೆ ಕ್ಯಾರೆಟ್ ಸೇವನೆಯಿಂದ ಕಣ್ಣು ಹೇಗೆ ಉತ್ತಮವಾಗಿರುತ್ತದೆ ಎನ್ನುವುದು ಗೊತ್ತಾ ನಿಮಗೆ,
ಕ್ಯಾರೆಟ್ನಲ್ಲಿ ಬೀಟಾ-ಕ್ಯಾರೋಟಿನ್ ಇದೆ, ಇದು ದೇಹವು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ, ಇದು ಕಣ್ಣಿನ ಆರೋಗ್ಯಕ್ಕೆ ಪ್ರಮುಖ ಪೋಷಕಾಂಶವಾಗಿದೆ. ವಿಟಮಿನ್ ಎ ಯ ತೀವ್ರ ಕೊರತೆಯು ಕುರುಡುತನಕ್ಕೆ ಕಾರಣವಾಗಬಹುದು.
ಮೆಂತೆ ಜೊತೆ ಬಾದಾಮಿ ಮತ್ತು ಕಲ್ಲುಸಕ್ಕರೆ ಬೆರೆಸಿ ಜೊತೆಯಾಗಿ ರುಬ್ಬಿ. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದಲೂ ಕಣ್ಣುಗಳ ದೃಷ್ಟಿ ಚುರುಕಾಗುತ್ತದೆ.
ಮೆಂತೆ ಸೊಪ್ಪು ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಡುವಲ್ಲಿ ಸಹಾಯ ಮಾಡುತ್ತದೆ. ವಾರದಲ್ಲಿ ಒಮ್ಮೆಯಾದರೂ ಮೆಂತೆ ಸೊಪ್ಪುನ್ನು ಸೇವನೆ ಮಾಡುವುದರಿಂದ ಕಣ್ಣಿನ ಪೊರೆ ಸಮಸ್ಯೆ ನಿವಾರಣೆಯಾಗುತ್ತದ ಎನ್ನುತ್ತಾರೆ ವೈದ್ಯರು.
ಜೀರಿಗೆ ಮತ್ತು ಕಲ್ಲುಸಕ್ಕರೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ನಯವಾಗಿ ರುಬ್ಬಿ ತುಪ್ಪದೊಂದಿಗೆ ಸೇವಿಸಿದರೆ ನಿಮ್ಮ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ