ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಭಾಷೆಯನ್ನು ಎಲ್ಲರೂ ಗೌರವಿಸುವ ನಿಟ್ಟಿನಲ್ಲಿ ವಾಣಿಜ್ಯೋದ್ಯಮಗಳ ಮುಂದೆ ಶೇ.60 ಕನ್ನಡ ಭಾಷೆಯುಳ್ಳ ನಾಮಫಲಕ ಅಳವಡಿಕೆ ಮಾಡಲು ಫೆ.28 ಕೊನೆಯ ದಿನವಾಗಿತ್ತು. ಆದ್ರೆ ಇದೀಗ ಅಂಗಡಿ ಮಾಲೀಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಯೆಸ್. ಬೆಂಗಳೂರಿನಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟು, ವಾಣಿಜ್ಯ ಉದ್ಯಮಗಳು, ಟ್ರಸ್ಟ್ಗಳು, ಆಸ್ಪತ್ರೆಗಳು, ಹೋಟೆಲ್ಗಳು ಸೇರಿ ಎಲ್ಲ ಮಾದರಿಯ ವಾಣಿಜ್ಯಾತ್ಮಕ ಕಟ್ಟಡಗಳ ನಾಮಫಲಕಗಳಲ್ಲಿ ಶೇ.60ರಷ್ಟು ದೊಡ್ಡದಾಗಿ ಕನ್ನಡ ಭಾಷೆ ಪ್ರದರ್ಶಿಸದ ಫಲಕ ಅಳವಡಿಸಬೇಕು. ಇಲ್ಲದಿದ್ದರೆ ಫೆ. ೨೮ ಕನ್ನಡ ನಾಮಫಲಕ ಅಳವಡಿಸದ ಎಲ್ಲ ಮಳಿಗೆಗಳ ಡೆಡ್ ಲೈನ್ ಆಗಿತ್ತು. ಆದ್ರೆ ಇದೀಗ ಡೆಡ್ ಲೈನ್ ಮುಂದುವರೆದಿದ್ದು ಇನ್ನು ೧೫ ದಿನಗಳ ಕಾಲ ಡಿಸಿಎಂ ಕಾಲಾವಧಿ ನೀಡಿದ್ದಾರೆ..
ಈ ಕುರಿದಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಪ್ರತಿಕ್ರಿಯಿಸಿದ್ದು, ನಾಮಫಲಕ ಅಳವಡಿಕೆಗೆ ಗಡಗು ಮುಗಿದಿದೆ. ಈಗಾಗಲೇ ಶೇಕಡ 95 ರಷ್ಟು ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕಿದ್ದಾರೆ. ಈಗ ನಾಮಫಲಕ ಅಳವಡಿಕೆಗೆ ಎರಡು ವಾರ ಸಮಯ ಕೊಡುತ್ತಿದ್ದೇವೆ. ಎರಡು ವಾರದ ಬಳಿಕ ನಾಮಫಲಕ ಅಳವಡಿಸಿದ್ದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತುಷಾರ್ ಗಿರೀನಾಥ್ ತಿಳಿಸಿದರು.
ಅಷ್ಟೇ ಅಲ್ಲದೇ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿನ ಎಲ್ಲಾ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಮೊದಲಾದಕಡೆ ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಹೆಚ್ಚಿನ ಸಮಯ ಬೇಕೆಂಬುದನ್ನು ಪರಿಗಣಿಸಿ, ಈಗಾಗಲೇ ನೀಡಲಾಗಿದ್ದ ಗಡುವನ್ನು 2 ವಾರಗಳ ಕಾಲ ವಿಸ್ತರಿಸಲಾಗಿದೆ ಎಂದರು.
ಒಟ್ಟಾರೆ ಹಲವಾರು ಅಂಗಡಿ ಮಾಲೀಕರು ಖುಷಿಯಾಗಿದ್ದು ಇನ್ನೂ ಕೂಡ ಎರಡು ವಾರಗಳ ಕಾಲಾವಕಾಶವಿದೆ.ಅಷ್ಟರಲ್ಲಿ ಅಂಗಡಿಯ ನಾಮಫಲಕವನ್ನು ಬದಲಾಯಿಸಿದಲ್ಲಿ ಬಚಾವ್.ಇಲ್ಲದಿದ್ದಾರೆ ಬಿಬಿಎಂಪಿ ಅಧಿಕಾರಿಗಳ ತರಾಟೆಗ ಸಿಗುವುದಂತೂ ಗ್ಯಾರಂಟಿ.. ಇದನ್ನು ಎಷ್ಟರ ಮಟ್ಟಿಗೆ ಪಾಲಿಸ್ತಾರೆ ಎಂದು ಕಾದು ನೋಡಬೇಕಾಗಿದೆ