ತಮಿಳು ಚಿತ್ರ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಾ ತಮ್ಮ ಸಿನಿಮಾದ ನಟಿಯೊಬ್ಬರ ಮೇಲೆ ಕೈ ಮಾಡಿದ್ದಾರಂತೆ. ಈ ವಿಷಯವನ್ನು ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತನ್ನ ಮೇಲೆ ಕೈ ಮಾಡಿದ ಕಾರಣಕ್ಕಾಗಿ ಆ ಸಿನಿಮಾದಿಂದ ತಾನು ಹೊರ ಬಂದಿದ್ದಾಗಿ ನಟಿ ಹೇಳಿಕೊಂಡಿದ್ದಾರೆ.
ಬಾಲಾ ನಿರ್ದೇಶನದ ವಾನಂಗನ್ ಸಿನಿಮಾದಲ್ಲಿ ಮಲಯಾಳಂ ಮೂಲದ ನಟಿ ಮಮತಾ ಬಿಜು ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ವಿಲ್ಲಡಿಚ್ಚಾಂಪಾಟನ್ ಕಲಾವಿದೆಯಂತೆ ವಾದ್ಯ ನುಡಿಸುತ್ತಾ ಡಾನ್ಸ್ ಮಾಡಬೇಕಿತ್ತಂತೆ. ನುರಿತ ಕಲಾವಿದರ ಜೊತೆ ಸಡನ್ನಾಗಿ ಬೆರೆಯೋದು ಕಷ್ಟವಾಯಿತು. ಹಾಗಾಗಿ ಮೂರು ಟೇಕ್ ತೆಗೆದುಕೊಂಡೆ. ಈ ಕಾರಣಕ್ಕಾಗಿ ನಿರ್ದೇಶಕರು ನನ್ನ ಮೇಲೆ ಹೊಡದೇ ಬಿಟ್ಟರು ಎಂದು ಮಮಿತಾ ಆರೋಪಿಸಿದ್ದಾರೆ.
ಸೆಟ್ ನಲ್ಲಿ ನಾನು ಕೋಪಿಷ್ಠ. ಬೈದರೆ ಮನಸ್ಸಿಗೆ ತಗೋಬೇಡಿ ಎಂದು ಬಾಲಾ ಅವರು ಮೊದಲೇ ಹೇಳಿದ್ದರೂ, ಅವರು ಬೈದಾಗೊಮ್ಮೆ ಕಿರಿಕಿರಿ ಅನಿಸೋದು. ಆದರೆ, ಅವರು ನನಗೆ ಹೊಡೆದ ಮೇಲೆ ಕೆಲಸ ಮಾಡಲು ಮನಸ್ಸಾಗಲಿಲ್ಲ. ಹಾಗಾಗಿ ಸಿನಿಮಾದಿಂದ ಹೊರ ನಡೆದೆ ಎಂದಿದ್ದಾರೆ.
ಪಿತಾಮಗನ್, ಸೇತು, ನಾನ್ ಕಡವುಲ್ ಸೇರಿದಂತೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದವರು ಬಾಲಾ. ತಮ್ಮ ಸಿನಿಮಾದಿಂದಾಗಿ ರಾಷ್ಟ್ರ ಮಟ್ಟದಲ್ಲೂ ಖ್ಯಾತಿ ಘಳೀಸಿದ್ದಾರೆ. ದೇಸಿ ಗುಣದ ಸಿನಿಮಾಗಳ ಜನಕ ಎಂದೆಲ್ಲ ಕರೆಯಿಸಿಕೊಂಡಿರುವ ಬಾಲಾ ತಮ್ಮದೇ ಸಿನಿಮಾದ ನಟಿಯನ್ನು ಹೊಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.