ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ ಚೋಪ್ರಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಮಾರ್ಚ್ನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ಮೀರಾ ಚೋಪ್ರಾ ರೆಡಿಯಾಗಿದ್ದಾರೆ.
ಮೀರಾಗೆ ಚೋಪ್ರಾ ಮದುವೆ ಇದೇ ಮಾರ್ಚ್ 11 ಮತ್ತು 12ರಂದು ನಡೆಯಲಿದೆ. ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್ವೊಂದರಲ್ಲಿ ಮೀರಾ ಮದುವೆ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ.
ಮೀರಾ ಮದುವೆ ಆಗುತ್ತಿರುವ ವರನ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಉದ್ಯಮಿಯ ಜೊತೆ ಮೀರಾ ಮದುವೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದ ಹಾಗೆ ಮೀರಾ ದರ್ಶನ್ ನಟನೆಯ ಅರ್ಜುನ್ ಸಿನಿಮಾದಲ್ಲಿ ನಟಿಸುವ ಮೂಲಕ ಗಾಂಧಿನಗರದಲ್ಲೂ ಸದ್ದು ಮಾಡಿದ್ದರು.