ಬೆಂಗಳೂರು: ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 8ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಬಾ ನಲ್ಲೆ ಮಧುಚಂದ್ರಕೆʼ ಖ್ಯಾತಿಯ ನಟ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ದಿಡೀರ್ ಹೃದಯಸ್ತಂಭನ ಹಾಗೂ ಮೆದುಳು ಸ್ಥಗಿತದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಇಂದು 7:30ಕ್ಕೆ ರಾಜಾಜಿನಗರದಲ್ಲಿರುವ ಅವರ ಮನೆಯಿಂದ ಹೊರಟು ರವೀಂದ್ರ ಕಲಾಕ್ಷೇತ್ರವನ್ನು ಪಾರ್ಥೀವ ಶರೀರ ತಲುಪಲಿದೆ. ಮಧ್ಯಾಹ್ನ 3 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಜಾಜಿನಗರದಿಂದ ರಸ್ತೆ ಮಾರ್ಗವಾಗಿ ಅಂತಿಮ ಯಾತ್ರೆ ಸಾಗಲಿದೆ.
ಅಂತ್ಯಸಂಸ್ಕಾರಕ್ಕೆ ನಿಖರ ಜಾಗ ಇನ್ನೂ ನಿಗದಿಯಾಗಿಲ್ಲ. ನಗರದ ದೊಡ್ಡಬಸತಿಯಲ್ಲಿರವ ಛಲವಾದಿ ಮಹಾಸಭಾ ಆವರಣದಲ್ಲಿ ಅಂತಿಮ ಸಂಸ್ಕಾರಕ್ಕೆ ಸರ್ಕಾರದ ಬಳಿ ಕುಟುಂಬಸ್ಥರು ಅನುಮತಿ ಕೋರಿದ್ದಾರೆ.
ನಟನಾಗೋಕು ಮೊದಲು ಐಎಎಸ್ ಅಧಿಕಾರಿಯಾಗಿದ್ದ ಶಿವರಾಮ್, 2013ರಲ್ಲಿ ಸ್ವಯಂ ನಿವೃತ್ತಿ ಪಡೆದು ರಾಜಕೀಯದಲ್ಲಿ ಸಕ್ರೀಯರಾಗಿದ್ರು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯಪುರದಿಂದ ಸ್ಪರ್ಧಿಸಿ ಸೋಲುಕಂಡಿದ್ರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ರು. ಅದೇನೆ ಇರ್ಲಿ ಬಾ ನಲ್ಲೆ ಮಧುಚಂದ್ರಕೆ ಎನ್ನುತ್ತಾ ಟೈಗರ್ ರೀತಿ ಘರ್ಜಿಸಿದ್ದ ನಟ ಇನ್ನೂ ನೆನಪುಮಾತ್ರ.