ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಮ್ಮ ಮಾತು ಎಲ್ಲಿ ಕೇಳ್ತಾರೆ ಎಂದು ಜಾತಿಗಣತಿ ವರದಿಗೆ ಶಾಸಕ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜಾತಿ ಜನಗಣತಿ ವರದಿ 9 ವರ್ಷ ಹಳೆಯದು, ಕಾಂತರಾಜು ವರದಿ ಕೊಟ್ಟಿದ್ದಾರೆ.ಇದು ಮನೆಯಲ್ಲಿ ಕೂತು ರೆಡಿ ಮಾಡಿರೋ ವರದಿ. ಸರಿಯಾದ ಜನಗಣತಿ ಮಾಡಲಿ ಜಾತಿ ವರದಿಯಲ್ಲಿ ಅವೈಜ್ಞಾನಿಕತೆ ಬೇಡ ಎಂದರು.
ಜಾತಿ ಜಾತಿ ನಡುವೆ ಗಲಾಟೆ ಆಗುತ್ತೆ ಸರ್ಕಾರ ಏನು ಮಾಡುತ್ತೆ ಅನ್ನೋದು ನೋಡೋಣ.ನಾವು ಸುಮ್ಮನೆ ಕೂರೋದಿಲ್ಲ ನಾವು ಉಪ ಪಂಗಡ ಸೇರಿ ಎರಡು ಕೋಟಿ ಮಂದಿ ಇದ್ದೇವೆ. ಅಗತ್ಯಬಿದ್ದರೆ ನಾವು ಖಾಸಗಿ ಸರ್ವೆ ಮಾಡಿಸುತ್ತೇವೆ. ನಮ್ಮ ಅಂಕಿ-ಅಂಶ ವೈಜ್ಞಾನಿಕವಾಗಿದೆ ಎಂದು ತೋರಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಲೋಕಸಭೆ ಚುನಾವಣೆಯಲ್ಲಿ ಸಮಸ್ಯೆ ಆಗುತ್ತೋ ಇಲ್ವೋ ಅಂತ ಹೇಳುವುದಕ್ಕೆ ಆಗುವುದಿಲ್ಲ ಇವರೇ ಛೂ ಬಿಡಬಹುದು,ಮುಂದೆ ಎಲ್ಲಾ ಗೊತ್ತಾಗುತ್ತೆ ಬಿಡಿ ಎಂದರು.