ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಇಂದಿನಿಂದ ಆರಂಭವಾಗಿದೆ. ವಿದ್ಯಾರ್ರಥಿಗಳು ಇಷ್ಟು ದಿನಗಳ ಕಾಳ ಅಭ್ಯಾಸ ಮಾಡಿ ಇದೀಗ ತಮ್ಮ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಿದೆ. ರಾಜ್ಯಾದ್ಯಂತ 1224 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಯಶಸ್ವಿಯಾಗಿ ನಡೆಯಿತು..
ಯಸ್… ಸೆಕೆಂಡ್ ಪಿಯು ವಿದ್ಯಾರ್ಥಿಗಳಿಗೆ ಇಂದು ಪ್ರಮುಖವಾದ ದಿನ..ಯಾಕಂದ್ರೆ ಇವತ್ತಿಂದ ದ್ವಿತೀಯ ಪಿಯು ಪರೀಕ್ಷೆ ಶುರುವಾಗಿದೆ .ಇಂದಿನಿಂದ 22ನೇ ತಾರೀಕುವರೆಗೂ ಪರೀಕ್ಷೆ ನಡೆಯಲಿದೆ.. ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆಯಿತು .ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. ಈಗ ನಡೆಯಲಿರುವ ಪರೀಕ್ಷೆ 1 ಅನ್ನು ಆರಾಮಾಗಿ ಬರೆಯಿರಿ. ಒಂದು ವೇಳೆ ಸರಿಯಾಗಿ ಪರೀಕ್ಷೆ ಎದುರಿಸಲಾಗದೇ ಇದ್ದರೆ ಮತ್ತೆ ಏಪ್ರಿಲ್ನಲ್ಲಿ ಮೊದಲ ವಾರ ಪರೀಕ್ಷೆ 2, ಏಪ್ರಿಲ್ ಕೊನೆಯ ವಾರದಲ್ಲಿ ಪರೀಕ್ಷೆ 3 ಅನ್ನು ಬರೆವ ಅವಕಾಶವಿದೆ.
ಈ ಬಾರಿ 6,98,624 ಮಕ್ಕಳು ದ್ವೀತಿಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಾರೆ. 2023-24 ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ 80-20 ಮಾದರಿಯಲ್ಲಿ ಇರುತ್ತದೆ. ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ 80 ಅಂಕಗಳಿಗೆ ಪರೀಕ್ಷೆ ಬರೆಯುತ್ತಾರೆ. ಇನ್ನು ಉಳಿದ 20 ಅಂಕಗಳು ಆಂತರಿಕ ಮೌಲ್ಯಮಾಪನದ ಮೂಲಕ ನೀಡಲಾಗುತ್ತದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪೋಷಕರ ಜೊತೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಭಯ ಹೇಳತೀರದಾಗಿತ್ತು.. ಪರೀಕ್ಷೆಯನ್ನು ಚೆನ್ನಾಗಿ ಬರಿಬೇಕು ಅಂತ ದೇವರ ದರ್ಶನ ಪಡೆದುಕೊಂಡು ಬಂದಿದ್ದರು.. ಇನ್ನು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಬೇಕು ಅಂತ ದೇವಸ್ಥಾನಕ್ಕೆ ಹೀಗಿ ಬಂದ್ವಿ ತುಂಬಾ ಭಯ ಆಗ್ತಿದೆ ಆದ್ರು ಎಕ್ಸ್ಂ ಚೆನ್ನಾಗಿ ಬರಬೇಕು ಅಂತ ಫುಲ್ ರೆಡಿಯಾಗಿದ್ದಿವಿ ಎಂದು ವಿದ್ಯಾರ್ಥಿಗಳು ಹೇಳಿದ್ರು..
ಒಟ್ಟಾರೆ ಯಾವುದೇ ರೀತಿಯಾದಂತಹ ತೊಂದರೆಗಳು ಆಗದೆ ಇಂದಿನ ಪರೀಕ್ಷ ಸುಸೂತ್ರವಾಗಿ ಆಗಿತ್ತು. ವಿಧ್ಯಾರ್ಥಿಗಳು ಭಯದಿಂದಲೇ ಪರೀಕ್ಷೆ ಬರೆದಿದ್ದಾರೆ..