ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಸಂಭ್ರಮ ಸಡಗರ ತುಂಬಿಕೊಂಡಿದೆ. ಮಗಳು ಈಗ ತಾನೆ ನಡೆಯಲು ಶುರುಮಾಡಿದ್ದು ಈ ಮಧ್ಯೆ ಮುದ್ದು ಕಂದ ತನ್ನ ತಮ್ಮನಿಗೆ ತೊಟ್ಟಿಲು ತೂಗಿ ಲಾಲಿ ಹಾಡಿದ್ದಾಳೆ.
ಹೌದು, ಧ್ರುವ ಸರ್ಜಾ ಮಗಳು ರುದ್ರಕ್ಷಿ ತನ್ನ ತಮ್ಮ ಮಲಗಿರುವ ವೇಳೆ ತೊಟ್ಟಿಲು ತೂಗಿ ಲಾಲಿ ಹಾಡಿದ್ದಾಳೆ. ಈ ವೀಡಿಯೋವನ್ನು ಧ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಸೆಪ್ಟೆಂಬರ್ 18 ರಂದು ಗಣೇಶ ಹಬ್ಬದಂದು ಪ್ರೇರಣಾ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದ ದಿನವೇ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ತಮ್ಮ ಮಕ್ಕಳ ನಾಮಕರಣವನ್ನು ನೆರವೇರಿಸಿದ್ದರು. ಮಗಳಿಗೆ ‘ರುದ್ರಾಕ್ಷಿ ಡಿ ಸರ್ಜಾ’ ಹಾಗೂ ಮಗನಿಗೆ ‘ಹಯಗ್ರೀವ ಡಿ ಸರ್ಜಾ’ ಎಂದು ನಾಮಕರಣ ಮಾಡಿದ್ದಾರೆ. ಇದೀಗಾ ರುದ್ರಾಕ್ಷಿ ತನ್ನ ತಮ್ಮ ಹಯಗ್ರೀವನಿಗೆ ಲಾಲಿ ಹಾಡುತ್ತಾ ಪುಟ್ಟ ಕೈಗಳಿಂದ ತೊಟ್ಟಿಲು ತೂಗುತ್ತಿರುವ ವಿಡಿಯೋ ವೈರಲ್ ಆಗಿದೆ.