ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮೇಶ್ವರಂ ಕೆಫೆ ಬ್ಲಾಸ್ಟ್ನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿರುವವರ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಎಲ್ಲಾ ಖರ್ಚು ಸರ್ಕಾರ ನೋಡಿಕೊಳ್ಳುತ್ತೆ ಎಂದು ಹೇಳಿದ್ದಾರೆ.
ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬ್ಲಾಸ್ಟ್ ಆದಾಗ ಲೇಡಿ ಅಲ್ಲೆ ಇದ್ದು, ಅವರಿಗೆ ಗಾಯಗಳಾಗಿದೆ. ಬೆಸ್ಟ್ ಟ್ರೀಟ್ಮೆಂಟ್ ಕೊಡೋಕೆ ಹೇಳಿದ್ದೀನಿ. ಈ ಟ್ರೀಟ್ಮೆಂಟ್ ವೆಚ್ಚ ಸರ್ಕಾರವೇ ಭರಿಸುತ್ತೆ ಎಂದರು.
ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೂರು ಜನ ಇದ್ದಾರೆ. ಅದರಲ್ಲಿ ಒಬ್ಬರಿಗೆ ಜಾಸ್ತಿ ಗಾಯಗಳಾಗಿವೆ. ಇವತ್ತು ಒಬ್ಬರು ಡಿಸ್ಚಾರ್ಜ್ ಆಗುತ್ತಾರೆ. ನಾಳೆ ಅಥವಾ ನಾಡಿದ್ದು ಉಳಿದವರು ಕೂಡ ಡಿಸ್ಚಾರ್ಜ್ ಆಗಬಹುದು. ಈ ಮೂವರಲ್ಲಿ ಒಬ್ಬರು ಅಲ್ಲಿಯ ಉದ್ಯೋಗಿಯಾಗಿದ್ದಾರೆ ಎಂದರು.