ಹೆಣ್ಣುಮಕ್ಳು ತಮ್ಮ ಸೌಂದರ್ಯ ವೃದ್ದಿಗೆ ಹೆಣ್ಣುಮಕ್ಕಳು ಇನ್ನಿಲ ಖಸರತ್ತು ನಡೆಸುತ್ತಾರೆ.
ಲಿಪ್ ಸ್ಟಿಕ್, ಪೌಡರ್, ಸ್ನೋ ಅಂತಾ ಒಂದ ಎರಡಾ ಅದ್ರಲ್ಲು ಬ್ರಾಂಡೆಡ್ ಕಾಸ್ಮೆಟಿಕ್ ಗೆ ಹೆಣ್ಣುಮಕ್ಕಳು ಮನಸೂರೆಗೊಳ್ಳುತ್ತಾರೆ.
ಸೌಂದರ್ಯ ವೃದ್ಧಿಸಿಕೊಳ್ಳಲು ಹಾದಿ ಬೀದಿಯಲ್ಲಿ ಸಿಗೋ ವಸ್ತುಗಳನ್ನ ಖರೀದಿ ಮಾಡೋ ಮುನ್ನ ಎಚ್ಚರ. ಬ್ರಾಂಡ್ ಹೆಸರಿನ ವಸ್ತುಗಳನ್ನ ಎಲ್ಲಂದ್ರೆ ಅಲ್ಲಿ ಕೊಳ್ಳುವ ಮುನ್ನ ಈ ಸ್ಟೋರಿ ನೋಡ್ಲೇ ಬೇಕು. ಅಪ್ಪಿ ತಪ್ಪಿ ಈ ವಸ್ತುಗಳನ್ನ ಖರೀದಿ ಮಾಡಿದ್ರೆ ನಿಮ್ಮ ಇರೋ ಸೌಂದರ್ಯ ಹಾಳಾಗೋದು ಪಕ್ಕಾ.
ಇಂತಹ ವಸ್ತುಗಳನ್ನ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಬ್ರಾಂಡೆಡ್ ಕಾಸ್ಮೆಟಿಕ್ ಹೆಸ್ರಲ್ಲಿ ನಕಲಿ ಕಾಸ್ಮೆಟಿಕ್ ಮಾರಾಟ ಮಾಡ್ತಿದ್ದಾರೆ. ಸಿಟಿ ಮಾರ್ಕೆಟ್, ಎಸ್ ಪಿ ರೋಡ್ ನ ಹಾದಿ ಬೀದಿಯಲ್ಲಿ ತಳ್ಳೋಗಾಡಿ ಮತ್ತು ಸಣ್ಣ ಅಂಗಡಿಗಳಲ್ಲಿ ಮಾರಾಟ ಮಾಡೋ ಜಾಲ ಪತ್ತೆಯಾಗಿದೆ. ಸುಪ್ರಸಿದ್ದ ಕಂಪನಿಯಾಗಿರೋ ಲ್ಯಾಕ್ ಮಿ, ಎಲ್ಲೆ18 ಕಂಪನಿಯ ನಕಲಿ ಸೌಂದರ್ಯ ವರ್ಧಕಗಳನ್ನ ಮಾರಾಟಮಾಡ್ತಿದ್ದ ಜಾಲದ ಮೇಲೆ ಸಿಸಿಬಿ ದಾಳಿ ನಡೆಸಿದೆ. ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಲಕ್ಷಾಂತರ ಮೌಲ್ಯದ ಲ್ಯಾಕ್ ಮಿ.ಎಲ್ಲೆ ಕಂಪನಿ ಹೆಸರಿನ ನಕಲಿ ಸೌಂದರ್ಯ ವರ್ಧಕಗಳು ಸೀಜ್ ಆಗಿದೆ. ಸಿಟಿ ಮಾರ್ಕೆಟ್ ಮತ್ತು ಹಲಸೂರು ಗೇಟ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇನ್ನೂ ಈ ದಂಧೆ ನಡೆಸುತ್ತಿದ್ದ ಮಹಾವೀರ್ ಮೇಲೆ ಎಫ್ ಐ ಆರ್ ದಾಖಲಾಗಿದದ್ದು ಈತನೆ ಇಡೀ ಬೆಂಗಳೂರಿಗೆ ನಕಲಿ ಕಾಸ್ಮೆಟಿಕ್ ಸಪ್ಲೈ ಮಾಡ್ತಿದ್ದ ಎಂಬುದು ಗೊತ್ತಾಗಿದೆ.