ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ರಾಜಕೀಯಕ್ಕೆ ಎಂಟ್ರಿಕೊಡ್ಬೇಕು ಅನ್ನೋದು ಅವರ ಲಕ್ಷಾಂತರ ಅಭಿಮಾನಿಗಳ ಆಸೆ. ಆದರೆ ಶಿವಣ್ಣ ಮಾತ್ರ ರಾಜಕೀಯಕ್ಕೆ ಎಂಟ್ರಿಕೊಡದೆ ಸಿನಿಮಾಗಳ ಮೂಲಕ ಮಾತ್ರವೇ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದಾರೆ. ಆದರೆ ಪತ್ನಿ ರಾಜಕೀಯ ಜೀವನಕ್ಕೆ ಶಿವಣ್ಣ ಸದಾ ಬೆನ್ನುಲುಭಾಗಿ ನಿಂತಿದ್ದಾರೆ. ಸದ್ಯ ಶಿವರಾಜ್ ಕುಮಾರ್ ಪತ್ನಿಯ ರಾಜಕೀಯ ಜೀವನದ ಕುರಿತು ಮಾತನಾಡಿದ್ದು ಪತ್ನಿ ಗೀತಾ ರಾಜಕೀಯವಾಗಿ ಬೆಳೆಯಬೇಕು, ಸಂಸದೆ ಆಗಬೇಕು ಎಂದಿದ್ದಾರೆ.
ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ ಶಿವರಾಜ್ಕುಮಾರ್ ದಂಪತಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ ನನ್ನ ಪತ್ನಿ ಎಂಪಿ ಆಗಲಿ, ಎಂಎಲ್ಎ ಆಗಲಿ ಎಂಬ ಆಸೆಯಿದೆ. ಈ ಮೂಲಕ ಮಹಿಳೆಯರಿಗೆ ಪತ್ನಿ ಗೀತಾ ಮಾದರಿಯಾಗಲಿ ಎಂದಿದ್ದಾರೆ.
ಒಬ್ಬ ಗಂಡನಾಗಿ ಗೀತಾಗೆ ಬೆಂಬಲಿಸುತ್ತೇನೆ. ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಪ್ರಚಾರದ ಕಡೆ ಗಮನ ನೀಡಿಲ್ಲ. ಉತ್ತಮ ಕೆಲಸಗಳ ಮೂಲಕ ಜನರೊಂದಿಗೆ ಇದ್ದರೆ ಸಾಕು ಎಂದಿರುವ ಶಿವಣ್ಣ ಪತ್ನಿ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.