ಬೆಂಗಳೂರು: ದಿವ್ಯಾಂಗರಿಗೆ ಅವಕಾಶ ನೀಡಿದರೆ ಅವರು ಸಾಧಿಸುವ ಛಲ ಹೊಂದಿದ್ದು, ಅವರು ಸ್ವಾಭಿಮಾನದಿಂದ ಬದುಕುತ್ತಾರೆ. ಅವರು ನಿಜವಾದ ಯೋಗಿಗಳು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಚಾಮರಾಜಪೇಟೆಯ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಸಕ್ಷಮ ವಿಶೇಷ ಚೇತನರ ದಕ್ಷಿಣ ಪ್ರಾಂತ ಅಧಿವೇಶನ ಉದ್ಘಾಟಿಸಿ ಮಾತನಾಡಿ, ವಿಕಲಚೇತನ, ವಿಶೇಷ ಚೇತನ ಅಂತ ಕರೆಯುತ್ತೇವೆ. ವಿಶೇಷ ಚೇತನರು ಯಾರು, ಎಲ್ಲ ಅಂಗಾಗಳನ್ನು ಹೊಂದಿರುವ ನಾವು ನೆಮ್ಮದಿಯಿಂದ, ಖುಷಿಯಿಂದ ಇದ್ದೇವೆಯೇ? ಭಗವಂತ ಕೊಟ್ಟಿರುವ ಎಲ್ಲ ಆಂಗಗಳನ್ನು ಸರಿಯಾಗಿ ಬಳಸಿಕೊಂಡಿದ್ದೇವಾ ? ಇಎನ್ ಟಿ ಪರೀಕ್ಷೆ ಮಾಡಿಸುವವರು ಯಾರು, ? ಕಣ್ಣಿನ ಪರೀಕ್ಷೆ ಮಾಡಿಸುವವರು ನಾವು ನಿಜವಾದ ದಿವ್ಯಾಂಗರು, ಕೆಲವು ಅಂಗ ಊನ ಇರುವವರು ಛಲದಿಂದ ಬದುಕುತ್ತಾರೆ ಎಂದು ಹೇಳಿದರು.