ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.
ಕಳೆದ 15 ವರ್ಷಗಳಲ್ಲಿ ನಡೆದ ಕರ್ನಾಟಕದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಸಂಖ್ಯೆ ಎಷ್ಟು..? ಎಲ್ಲೆಲ್ಲಿ ಘಟನೆ ನಡೆದಿದೆ ಮತ್ತು ಎಷ್ಟು ಸಾವು ನೋವುಗಳಾಗಿವೆ..!? ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡೋಣ!
1) ದಿನಾಂಕ 10/4/2010 ಬೆಂಗಳೂರು ಚಿನ್ನಸ್ವಾಮಿ ಬ್ಲಾಸ್ಟ್ ಪ್ರಕರಣ – ಘಟನೆಯಲ್ಲಿ 15 ಮಂದಿಗೆ ಗಾಯ.. ಆಡಳಿತದಲ್ಲಿದ್ದ ಪಕ್ಷ ಬಿಜೆಪಿ
2) 25/07/2008 ಬೆಂಗಳೂರು ಸರಣಿ ಬಾಂಬ್ ಸ್ಪೋಟ,
1 ಸಾವು, 25 ಜನರಿಗೆ ಗಾಯಾ..
ಆಡಳಿತದಲ್ಲಿದ್ದ ಪಕ್ಷ ಬಿಜೆಪಿ
3) 17/04/2013 ಬೆಂಗಳೂರಿನ ಮಲ್ಲೇಶ್ವರಂ ನ ಬಿಜೆಪಿ ಕಚೇರಿಯ ಮುಂಭಾಗದಲ್ಲಿದ್ದ ಮೋಟಾರ್ ಸೈಕಲ್ ನಲ್ಲಿ ಬಾಂಬ್ ಬ್ಲಾಸ್ಟ್ 12 ಜನ ಪೊಲೀಸ್ ಸಿಬ್ಬಂದಿ ಮತ್ತು 6 ಜನ ನಾಗರಿಕರು ಗಾಯಗೊಂಡಿದ್ದರು ಆಡಳಿತದಲ್ಲಿದ್ದ ಪಕ್ಷ ಬಿಜೆಪಿ..
4) 28/12/2014 ಚರ್ಚ್ ಸ್ಟ್ರೀಟ್ ನಲ್ಲಿ ಕೊಕನೆಟ್ ಗ್ರೋ ಬಳಿ ಬ್ಲಾಸ್ಟ್ ಘಟನೆಯಲ್ಲಿ ಸಾವನಪ್ಪಿದ್ದ ಓರ್ವ ಮಹಿಳೆ
ಆಡಳಿತದಲ್ಲಿದ್ದ ಪಕ್ಷ ಕಾಂಗ್ರೆಸ್
5) 26/08/2022 ಶಿವಮೊಗ್ಗ ತುಂಗಾನಗರ ತೀರದಲ್ಲಿ ಟ್ರರಲ್ ಬ್ಲಾಸ್ಟ್ – ಆಡಳಿತದಲ್ಲಿದ್ದ ಪಕ್ಷ ಬಿಜೆಪಿ
6) 19/11/2022 ಮಂಗಳೂರು ಗರೋಡಿಯಲ್ಲಿ ಆಟೋ ರಿಕ್ಷಾದಲ್ಲಿ ಕುಕ್ಕರ್ ಬ್ಲಾಸ್ಟ್ – ಆಟೋ ಚಾಲಕ ಮತ್ತು ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯ ಆಡಳಿತದಲ್ಲಿದ್ದ ಪಕ್ಷ ಬಿಜೆಪಿ
7) 1/03/2024 ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟ ಬ್ಯಾಗ್ನಲ್ಲಿ ತಂದಿದ್ದ ಬಾಂಬ್ ಬ್ಲಾಸ್ಟ್ – 10 ಜನರು ಹೋಟೆಲ್ ಬಂದಿದ್ದ ಗ್ರಾಹಕರಿಗೆ ಗಾಯಾ
ಆಡಳಿತದಲ್ಲಿರುವ ಪಕ್ಷ ಕಾಂಗ್ರೆಸ್