ಬೆಂಗಳೂರು:- ಒಂದೆಡೆ ಈ ಬಾರಿ ಅಂದುಕೊಂಡಂತೆ ಸಕಾಲಕ್ಕೆ ಮಳೆ ಆಗಲಿಲ್ಲ. ಇದರಿಂದ ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಸಂಕಷ್ಟ ಅನುಭವಿಸಿದ್ದ.
ಮತ್ತೊಂದೆಡೆ ಬಿರು ಬೇಸಿಗೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ಬೇಗೆಗೆ ಬೆಂಗಳೂರು ಜನ ಬೇಸತ್ತು ಹೋಗಿದ್ದಾರೆ. ಬೆಂಗಳೂರಿನಲ್ಲಿ ಅತೀ ಫೆಬ್ರವರಿ ತಿಂಗಳಲ್ಲೇ ಹೆಚ್ಚು ಉಷ್ಣಾಂಶ ದಾಖಲಾಗಿದ್ದು, ಬಿಸಿಲಿನ ಶಾಖಕ್ಕೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ.
ಬೇಸಿಗೆ ಶುರುವಾಗ್ತಿದ್ದಂತೆ ನಾನ ರೀತಿಯ ಕಾಯಿಲೆ ವಕ್ಕರಿಸುತ್ತಿದ್ದು, ಅತಿಯಾದ ಉಷ್ಣಾಂಶದಿಂದ ಸಂಭವಿಸುವ ಅನಾರೋಗ್ಯ ಪರಿಸ್ಥಿತಿ ನಿಭಾಯಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.
ಅಲ್ಲದೇ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ಬೇಸಿಗೆ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವಂತೆ ಎಚ್ಚರಿಕೆ
ಹೆಚ್ಚು ನೀರು ಕುಡಿಯುವಂತೆ ಸಾರ್ವಜನಿಕರಿಗೆ ಸೂಚನೆ
ಬಿಸಿಲಿನ ಶಾಖವನ್ನು ತಪ್ಪಿಸಲು ದೇಹವನ್ನು ತಂಪಾಗಿರಿಸಲು ಸಲಹೆ
ಸಾಧ್ಯವಾದಷ್ಟು ಒಳಾಂಗಣದಲ್ಲಿ ಇರುವಂತೆ ಸೂಚನೆ
ಉತ್ತಮ ಗಾಳಿ ತಂಪಾದ ಪ್ರದೇಶದಲ್ಲಿರಲೂ ಸಲಹೆ
ನವಜಾತ ಶಿಶುಗಳು ಹಾಗೂ ಗರ್ಭಿಣಿಯರ ಬಗ್ಗೆ ಕಾಳಜಿವಹಿಸುವುಂತೆ ಅರಿವು
ಬೇಸಿಗೆ ಬಿಸಿಲಿಗೆ ಏನು ಮಾಡಬಾರದು?
ಮಧ್ಯಾಹ್ನದ ಸಮಯದಲ್ಲಿ ಹೊರಗಡೆ ಸುತ್ತಾಡುವುದು ನಿಲ್ಲಿಸಿ
ಚಪ್ಪಲಿ ಧರಿಸದೆ ಓಡಾಡುವುದನ್ನು ಅದಷ್ಟೂ ತಪ್ಪಿಸಿ
ಮಧ್ಯಾಹ್ನದ ಸಮಯದಲ್ಲಿ ಅಡುಗೆ ಮಾಡುವುದನ್ನು ಅದಷ್ಟೂ ಕಡಿಮೆಗೊಳಿಸಿ
ಕಿಟಕಿ ಬಾಗಿಲು ತೆರೆದಿಡದೆ ಗಾಳಿ ಬರದ ಕಡೆ ಅಡುಗೆ ಸಿದ್ದಪಡಿಸುವುದು