ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಿಜೆಪಿ ಖಾಸಗಿ ಲ್ಯಾಬ್ ವರದಿಯನ್ನು ಬಿಡುಗಡೆ ಮಾಡಿದೆ. ಹಾಗೆ ಬಿಜೆಪಿಯವರು ಖಾಸಗಿ ಸಂಸ್ಥೆಗಳನ್ನು ಇಟ್ಟುಕೊಂಡುಹಾಗೆ ಖಾಸಗಿಯಾಗಿ ಫೋರೆನ್ಸಿಕ್ ವರದಿಗಳನ್ನು ತರಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುವುದೇ ಮೊದಲನೇ ದೇಶದ್ರೋಹದ ಕೆಲಸ ಎಂದು ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯವ್ರು ದೇಶದ್ರೋಹದ ಘೋಷಣೆ ಕೂಗಿದ್ದಾರೆ ಅಂತ ಹೇಳ್ತಾ ಇದ್ದಾರೆ.ಬಿಜೆಪಿಯವರು ಖಾಸಗಿ ಸಂಸ್ಥೆಗಳ ಹತ್ತಿರ ಹೋಗಿ ಅದನ್ನು ಪಬ್ಲಿಕ್ ಮಾಡ್ತಾ ಇದ್ದಾರಲ್ಲಅದು ಮೊದಲನೇ ದೇಶದ್ರೋಹದ ಕೆಲಸ ಕ್ಲೂ ಫಾರ್ ಎವಿಡೆನ್ಸ್ ಫೋರೆನ್ಸಿಕ್ ಲ್ಯಾಬ್ ಅನ್ನೋ ಸಂಸ್ಥೆಯ ಕ್ರೆಡಿಬಿಲಿಟಿ ಏನು? ಇವರು ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ ಆ ಸಂಸ್ಥೆಗೆ ಸರ್ಕಾರದ ಸರ್ಟಿಫಿಕೇಶನ್ ಇದಿಯೋ ತರಬೇತಿ ಇದೆಯೋ ನನಗೆ ಗೊತ್ತಿಲ್ಲ ಇದ್ದರೂ ಕೂಡ ಆ ಲ್ಯಾಬ್ ಈ ವಿಚಾರದಲ್ಲಿ ಸ್ಥಳೀಯ ಪೊಲೀಸರಿಗೆ ಮತ್ತು ಸರ್ಕಾರದ ಗಮನಕ್ಕೆ ತಂದು ವರದಿ ಕೊಡಬೇಕಿತ್ತುಅಷ್ಟು ಮೆಚುರಿಟಿ ಸಂಸ್ಥೆಗೆ ಇರಬೇಕಾಗಿತ್ತು ಅಲ್ಲವೇ..? ಎಂದರು.
ಬಿಜೆಪಿಯವರು ಫೋರೆನ್ಸಿಕ್ ಲ್ಯಾಬ್ ಗೆ ಕೊಟ್ಟಿರುವ ಫೂಟೇಜ್ ಯಾವುದು..? ಇಂಟರ್ನೆಟ್ ನಲ್ಲಿ ವಿಡಿಯೋ ಕ್ವಾಲಿಟಿ ಸಪ್ರೆಸ್ ಆಗೆ ಆಗುತ್ತದೆ ಯಾವ ಫೂಟೇಜ್ ಕೊಟ್ಟಿದ್ದಾರೆ ಮೊದಲನೇ ಪ್ರಶ್ನೆ ರಾ ಫೂಟೇಜ್ ಕೊಟ್ಟಿದ್ರೆ ಇವರಿಗೆ ರಾ ಫೂಟೇಜ್ ಎಲ್ಲಿಂದ ಸಿಕ್ತು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.