ಶುಕ್ರವಾರ ಮಧ್ಯಾಹ್ನ 12:55ಕ್ಕೆ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲ್ಯಾಸ್ಟ್ ಆಗಿದ್ದೇ ತಡ ರಾಜ್ಯ ಸರ್ಕಾರಕ್ಕೆ ಬಾಂಬ್ ಬೆದರಿಕೆ ಹಾಕುವ ಇನ್ನೊಂದು ಇಮೇಲ್ ಬಂದಿದೆ.
ಶನಿವಾರ ಮಧ್ಯಾಹ್ನ 2:48ಕ್ಕೆ ಬ್ಲ್ಯಾಸ್ಟ್ ಮೇಲ್ ಮಾಡಿರೋ ಮಾಹಿತಿ ಶಾಹಿದ್ ಖಾನ್ ಎಂಬ ಹೆಸರಿನಲ್ಲಿ ಸರ್ಕಾರಕ್ಕೇ ಬಾಂಬ್ ಬ್ಲ್ಯಾಸ್ಟ್ ಮೇಲ್ ಬಂದಿದ್ದು ಸಿಎಂ, ಡಿಸಿಎಂ, ಗೃಹ ಸಚಿವರಿಗೆ ಮೇಲ್ ಮಾಡಿರುವ ದುಷ್ಕರ್ಮಿಗಳು.. ಖುದ್ದು ಪೊಲೀಸರೇ ದಾಖಲಿಸಿರೋ ಎಫ್ಐಆರ್ ನಲ್ಲಿದೆ ಸ್ಫೋಟಕ ಅಂಶ ಬಯಲಾಗಿದೆ.
ಮಾರ್ಚ್ 4 ನಿನ್ನೆ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಯುತ್ತಿದ್ದು ಬಸ್ಸು, ರೈಲು, ದೇವಸ್ಥಾನ, ಹೋಟೆಲ್ ಗಳಲ್ಲಿ ಬಾಂಬ್ ಇಡ್ತೀವಿ ಅಂತಾ ಬೆದರಿಕೆ ಹಾಕಿದ್ದಾರೆ. ಹಾಗೆ ಸಾರ್ವಜನಿಕ ಸ್ಥಳಗಳು ಹಾಗೂ ಅಂಬಾರಿ ಉತ್ಸವ ಬಸ್ ಗಳಲ್ಲಿ ಬಾಂಬ್ ಇಡ್ತೀವಿ ಅಂತಾ ಬೆದರಿಕೆ ಒಡಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಗೇ ಬೆದರಿಕೆ ಮೇಲ್ ಕಳುಹಿಸಿರುವ ದುಷ್ಕರ್ಮಿಗಳು. ಬಾಂಬ್ ಬ್ಲ್ಯಾಸ್ಟ್ ಮಾಡ್ತೀವಿ ಅಂತ ಮೇಲ್ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡ್ತಿರೋರು ಯಾರು? – ಏನು ಎಂದು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಟೀಮ್ ನಿಂದ ತನಿಖೆ ನಡೆಯಲಿದ್ದು ಎಲ್ಲರಿಗೂ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿರೋ ದುಷ್ಕರ್ಮಿ ಸದ್ಯ ಸೈಬರ್ ಪೊಲೀಸರಿಂದ ಮುಂದುವರೆದ ತನಿಖೆ ನಡೆಯುತ್ತಿದೆ.