ಇಡಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವ ವಿಚಾರ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿಂದಲೇ ನ್ಯಾಯಾಧೀಶರು ಹಾಗೂ ಸುಪ್ರೀಂಕೋರ್ಟ್ಗೆ ನನ್ನ ಸಾಷ್ಟಾಂಗ ನಮಸ್ಕಾರ. ಧನ್ಯವಾದ ಹೇಳ್ತೀನಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತಪ್ಪು ಮಾಡಿಲ್ಲ ಅಂತ ಹಿಂದಿನಿಂದಲೂ ಹೇಳಿದ್ದೇನೆ. ಸಾಕಷ್ಟು ತೊಂದರೆಯನ್ನು ನಾನು ಅನುಭವಿಸಿದ್ದೇನೆ. ಸಿಬಿಐ ಅವರು ಈಗಲೂ ತನಿಖೆ ಮಾಡ್ತಾ ಇದ್ದಾರೆ. ನಾನು ಅದರ ಬಗ್ಗೆ ಮಾತನಾಡಲ್ಲ ಈಗ ಎಂದು ತಿಳಿಸಿದ್ದಾರೆ.
ಇಂದು ಅತೀ ದೊಡ್ಡ ಸಂತೋಷದ ದಿನ. ಪೋನ್ಗಳ ಸುರಿಮಳೆ ಬರ್ತಾ ಇದ್ವು. ಸುರ್ಜೇವಾಲಾ ಸೇರಿ ಅನೇಕರು ಕೋರ್ಟ್ ನಲ್ಲಿ ಕೂತಿದ್ದರಂತೆ. ಅಪೀಲು ಹಾಕೋದಕ್ಕೂ ಅನೇಕರು ತಯಾರಿದ್ದಾರಂತೆ ಆಗಲಿ. ನನ್ನ ಸುತ್ತಮುತ್ತ ಇರುವವರಿಗೂ ಅರಸ್ಮೆಂಟ್ ನಡೀತಲೇ ಇದೆ. ರಾಜಕಾರಣ ಮಾಡುವಾಗ ಪ್ರತಿ ಹಂತದಲ್ಲೂ ಇದು ಆಗುತ್ತೆ. ನನಗೆ ಯಾವ ವಿರೋಧಿಗಳಿಲ್ಲ. ನನ್ನನ್ನ ಶೇಖ್ ಮಾಡ್ತಾರೆ ಅಷ್ಟೇ ಎಂದು ಹೇಳಿದ್ದಾರೆ.