ಜಾಮ್ ನಗರದಲ್ಲಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾಣಿ ಮಗನ ಮದುವೆ ಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ದೇಶ, ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದ ಸ್ಪರ್ಗವೇ ಧರೆಗಿಳಿದಿದೆಯೆನೋ ಅನ್ನೋ ಅಷ್ಟರ ಮಟ್ಟಿಗೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಈ ವಿವಾಹದಲ್ಲಿ ಅಂಬಾನಿ ಕುಟುಂಬದವರು ಧರಿಸಿದ್ದ ಸೀರೆ, ಒಡವೆಗಳು ಸಖತ್ ಹೈಲೈಟ್ ಆಗಿದೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 ರಿಂದ 3ರ ವರೆಗೆ ಅದ್ಧೂರಿಯಾಗಿ ನಡೆದಿದೆ. ಅಂಬಾನಿಯ ಭಾವಿ ಸೊಸೆ ಸೀರೆಯಲ್ಲಿ ಮಿಂಚಿದ್ದು,ರಾಧಿಕಾಗೆ ಸೀರೆ ಉಡಿಸಿದ ಸ್ಟೈಲಿಸ್ಟ್ಗೆ ಬರೋಬ್ಬರಿ 2 ಲಕ್ಷ ರೂ ಸಂಭಾವಣೆ ನೀಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ.
ಅಂದಹಾಗೆ ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿರೋದು ಬೆಂಗಳೂರಿನ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್ ಡಾಲಿ ಜೈನ್. ಬೆಂಗಳೂರಿನಲ್ಲಿ ಜನಿಸಿದ ಡಾಲಿ ಜೈನ್ ಮದುವೆಯ ಬಳಿಕ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ರೇಷ್ಮೆ ಸೀರೆಯನ್ನು 325 ವಿಧಗಳಲ್ಲಿ ಉಡುವ ದಾಖಲೆಯನ್ನೂ ಅವರು ಹೊಂದಿದ್ದಾರೆ. ಮದುವೆಗೆ ಮುಂಚೆಯೇ ಸೀರೆಗಳನ್ನು ಇಷ್ಟಪಡದ ಜೈನ್, ಮನೆಯಲ್ಲಿ ಮದುವೆಯಾದ ನಂತರ ಪ್ರತಿದಿನವೂ ಸೀರೆಗಳನ್ನು ಧರಿಸುವಂತೆ ಒತ್ತಾಯಿಸಲಾಯಿತು. ನಂತರ ಇವರು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.
ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್ ಈಗ ಸೆಲೆಬ್ರಿಟಿಗಳಿಗೆ ಸೀರೆ ಉಡಿಸುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾರೆ. ಸೀರೆ ಉಡಿಸಲು 35,000 ರಿಂದ 2 ಲಕ್ಷ ರೂ. ಪಡೆಯುತ್ತಿದ್ದು, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಸಾಕಷ್ಟ ಸೆಲೆಬ್ರಿಟಿಗಳ ಮದುವೆಯಲ್ಲಿ ಸೀರೆ ಉಡಿಸಿ ಲಕ್ಷ ಲಕ್ಷ ಸಂಪಾದಿಸಿದ್ದಾರೆ.
2011 ರಲ್ಲಿ, ಡಾಲಿ ಜೈನ್ ಅತ್ಯಂತ ವೇಗವಾಗಿ ಸೀರೆ ಉಡಿಸುವ ಮೂಲಕ ಅಂದರೆ 18.5 ಸೆಕೆಂಡುಗಳಲ್ಲಿ ಸೀರೆ ಉಡಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ಸೋನಮ್ ಕಪೂರ್, ಪ್ರಿಯಾಂಕಾ ಚೋಪ್ರಾ,ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ ಜಯಲಲಿತಾ ಮತ್ತು ದಿ ಶ್ರೀದೇವಿಯವರಿಗೆ ಸೀರೆ ಉಡಿಸಿದ್ದಾರೆ.