ಚರ್ಮವು ಮಾನವನ ದೇಹದಲ್ಲಿ ಅತಿ ದೊಡ್ಡ ಅಂಗವಾಗಿದೆ. ಚರ್ಮವು ಏಳು ಪದರಗಳನ್ನು ಒಳಗೊಂಡಿರುತ್ತದೆ. ಉತ್ತಮವಾದ ಆರೋಗ್ಯದ ಚರ್ಮವನ್ನು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಆದರೆ ಎಲ್ಲರಿಗೂ ಉತ್ತಮವಾದ ಚರ್ಮ ದೊರೆಯುವುದಿಲ್ಲ. ಈ ರೀತಿಯ ಚರ್ಮದ ಸಮಸ್ಯೆಗಳಿಗೆ ಹಲವಾರು ರೀತಿಯ ಕಾರಣಗಳಿವೆ.
ದ್ರಾಕ್ಷಿ ಜ್ಯೂಸ್ ಸೇವಿಸುವುದರಿಂದ ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಅನೇಕ ಜನರು ಕೂದಲು ಬೆಳವಣಿಗೆಯ ಸಮಸ್ಯೆಗಳನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಅನುಭವಿಸುತ್ತಾರೆ. ನಿತ್ಯವೂ ದ್ರಾಕ್ಷಿಯ ಜ್ಯೂಸ್ ಕುಡಿದರೆ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ.
ಹಲವು ಸಂಶೋಧನೆಗಳು ಹೇಳುವ ಪ್ರಕಾರ, ಕೆಂಪು ಅಥವಾ ನೀಲಿ ದ್ರಾಕ್ಷಿ ಹಣ್ಣುಗಳ ರಸ ವೈನ್ ನೀಡುವಷ್ಟೇ ಹೃದಯ ಸಂಬಂಧಿ ತೊಂದರೆಗಳಿಗೆ ಲಾಭವನ್ನು ನೀಡುತ್ತವೆ. ಈ ಹಣ್ಣಿನ ಜ್ಯೂಸ್ ಗಳು ರಕ್ತ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ನಿಮ್ಮ ಹೃದಯದಲ್ಲಿರುವ ರಕ್ತನಾಳಗಳು ಘಾಸಿಗೊಳ್ಳದಂತೆ ಕಾಪಾಡುವುದು, ಉತ್ತಮವಾದ ರಕ್ತದೊತ್ತಡವನ್ನು ಕಾಪಾಡುವುದು ಹೀಗೆ ಹಲವಾರು ರೀತಿಯ ಉಪಯೋಗಗಳನ್ನು ನೀಡುತ್ತವೆ.
ಕೇವಲ ದ್ರಾಕ್ಷಿ ಹಣ್ಣುಗಳು ಅಷ್ಟೇ ಅಲ್ಲದೆ ದ್ರಾಕ್ಷಿ ಗಿಡದ ಚರ್ಮ, ತೊಗಟೆ, ಕಾಂಡ, ಎಲೆ ಹಾಗೂ ಬೀಜಗಳಲ್ಲಿ ಕೂಡ ಹಲವಾರು ಆಂಟಿಆಕ್ಸಿಡೆಂಟ್ ಗಳು ಉಪಸ್ಥಿತ ಇರುತ್ತವೆ. ಯಾವುದೇ ಹಣ್ಣುಗಳನ್ನೇ ಆಗಲಿ ಜ್ಯೂಸ್ ಮಾಡಿ ಕುಡಿಯುವುದಕ್ಕಿಂತ ಪೂರ್ಣ ಹಣ್ಣುಗಳನ್ನು ತಿಂದರೆ ಹಣ್ಣಿನಲ್ಲಿರುವ ಫೈಬರ್ ಅಥವಾ ನಾರಿನಾಂಶ ಕೂಡ ದೇಹಕ್ಕೆ ಲಭ್ಯವಾಗುತ್ತದೆ
ದ್ರಾಕ್ಷಿಯಲ್ಲಿ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುವ ಕಿಣ್ವಗಳಿವೆ. ದ್ರಾಕ್ಷಿಯ ಜ್ಯೂಸ್ ಸೇವಿಸುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ದ್ರಾಕ್ಷಿ ಜ್ಯೂಸ್ ಕುಡಿಯುವುದು ತುಂಬಾ ಸಹಕಾರಿ.
ಒಂದು ನಿರ್ದಿಷ್ಟ ವಯಸ್ಸಿನ ನಂತರ ಮಹಿಳೆಯರ ಮೂಳೆ ಶಕ್ತಿ ಕಡಿಮೆಯಾಗುತ್ತದೆ. ಈ ಸಮಸ್ಯೆ ಪುರುಷರನ್ನೂ ಬಾಧಿಸುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ದ್ರಾಕ್ಷಿ ಜ್ಯೂಸ್ ಕುಡಿಯಬೇಕು.
ದ್ರಾಕ್ಷಿ ಜ್ಯೂಸ್ ಉತ್ತಮ ನಿದ್ರೆಗೆ ಸಹಕಾರಿ. ನಿಯಮಿತವಾಗಿ ದ್ರಾಕ್ಷಿ ರಸವನ್ನು ಕುಡಿಯುವುದು ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ.