ಕರ್ನಾಟಕ ಸರ್ಕಾರವು ಮೊದಲ ವಿದ್ಯಾರ್ಥಿಗೆ ಶಾಲಾ ಪ್ರವೇಶದ ವಯೋಮಿತಿಯನ್ನು ಜೂನ್ 1 ರಿಂದ 6 ವರ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಆರ್ಟಿಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರ ಅಡಿಯಲ್ಲಿ, ಪ್ರಥಮ ದರ್ಜೆಗೆ ಪ್ರವೇಶಕ್ಕೆ ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗಿದೆ.
ಆರ್ಟಿಇ ಕಾಯಿದೆ 2009 ಸೆಕ್ಷನ್ 12(1)(ಸಿ) ಅಡಿಯಲ್ಲಿ 2016-17ರ ಶೈಕ್ಷಣಿಕ ವರ್ಷದಲ್ಲಿ ಎಲ್ಕೆಜಿಗೆ ಪ್ರವೇಶಕ್ಕೆ ಕನಿಷ್ಠ ವಯೋಮಿತಿಯನ್ನು 3 ವರ್ಷ 10 ತಿಂಗಳಿಂದ 4 ವರ್ಷ 10 ತಿಂಗಳವರೆಗೆ ನಿಗದಿಪಡಿಸಲಾಗಿತ್ತು ಮತ್ತು ಮೊದಲನೇ ತರಗತಿಗೆ ಈ ನಡುವೆ ನಿಗದಿಪಡಿಸಲಾಗಿದೆ. 5 ವರ್ಷ 10 ತಿಂಗಳಿಂದ 6 ವರ್ಷ 10 ತಿಂಗಳು ಆಗಿರಲೇಬೇಕು
ಆರ್ ಟಿ ಇ ಕಾಯಿದ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿ ಪಡಿಸಿ ಉಲ್ಲೇಖ-2 ರನ್ವಯ ತಿದ್ದುಪಡಿ ಆದೇಶ ಹೊರಡಿಸಿರುತ್ತದೆ. ಅದರಂತೆ ಕ್ರಮವಹಿಸಲು ಇಲಾಖೆಯ ಎಲ್ಲಾ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ