ಬೆಂಗಳೂರು: ದಲಿತರು ಸಿಎಂ ಆಗಬೇಕು ಎಂದು ಮಾತಾನಾಡಿದ್ದ ಸಚಿವ ಹೆಚ್.ಸಿ.ಮಹದೇವಪ್ಪ ಇಂದು ಯೂಟರ್ನ್ ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಹೇಳಿದ್ದಾರೆ. ಮೀಸಲಾತಿಯಿಂದ ಸಂತೋಷವಾಗಿಲ್ಲ. ನನ್ನ ಜನರು ಅಧಿಕಾರದಲ್ಲಿ ಇರಬೇಕು. ಪಾಲಿಸಿ ಮೇಕಿಂಗ್ ಚೇರ್ನಲ್ಲಿ ಇರಬೇಕು ಅಂತ ಹೇಳಿದ್ದಾರೆ. ಅದಕ್ಕೆ ನಮ್ಮ ಜನರು ಒಗ್ಗಟ್ಟಾಗಬೇಕು ಅಂತ ಹೇಳಿದ್ದು. ಮತ ಹಾಕ್ತಿರಾ, ಆಯಾ ಜಾತಿಯವರು ನಾಯಕನ ಹಿಂದೆ ಹೋಗ್ತಾರೆ. ನೀವು ಮತಹಾಕಿ ಸುಮ್ಮನಾಗಿ ಬಿಡ್ತೀರಾ. ನಾವು ಮತ ಹಾಕಿ ಬೇರೆಯವರ ಮುಂದೆ ಕೈಜೊಡಿಸುತ್ತೇವೆ. ನಮ್ಮಿಂದ ಮತ ಪಡೆದವರು ನಮ್ಮ ಮೇಲೆ ಆಡಳಿತ ಮಾಡ್ತಾರೆ. ಅದಕ್ಕಾಗಿ ಒಗ್ಗಾಟಾಗಿ ಅಂತ ಹೇಳಿದ್ದು ಎಂದು ತಿಳಿಸಿದ್ದಾರೆ
ಬಹುಜನ ಸಮಾಜ ಒಂದಾಗಿದೆ. ನಿಮಗೆ ಕಣ್ಣು ಕಾಣಲ್ವಾ? ಬಹುಜನರು ಒಂದಾಗಿದ್ದಕ್ಕೆ ಕಾಂಗ್ರೆಸ್ ಗೆಲ್ತಾ ಇರೋದು. ಬೇಕಾದಷ್ಟು ದಲಿತರಿಗೆ ಕಾಂಗ್ರೆಸ್ ಸಿಎಂ ಮಾಡಿದೆ. ಬೇರೆ ಪಾರ್ಟಿ ಕೂಡ ಸಿಎಂ ಮಾಡಬೇಕು. ಈ ಸಮುದಾಯಗಳ ಕುರಿತು ಮಾತನಾಡಿದ್ದೇನೆ. ಪಾರ್ಟಿ ಬಗ್ಗೆ ಹೇಳಿಕೆ ನೀಡಿಲ್ಲ. ವಿಷಯ ಕಾಂಪ್ಲಿಕೇಟ್ ಮಾಡಬೇಡಿ ನೀವು ಎಂದು ದಲಿತ ಸಿಎಂ ಬೇಡಿಕೆ ಇಟ್ಟು ಉಲ್ಟಾ ಹೊಡೆದಿದ್ದಾರೆ.