ಬೆಂಗಳೂರು: ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ನೀಡುವುದರಿಂದ ಹಾಗೂ ಹೆಸರು ಸೇರ್ಪಡೆಗೆ ಅವಕಾಶವನ್ನು ಕಲ್ಪಿಸಿ ಕೊಡುವುದರಿಂದ ಅನೇಕ ಜನರಿಗೆ ಉಪಯೋಗವಾಗಲಿದೆ
ಈಗಾಗಲೇ ಸರ್ಕಾರದ ಆದೇಶದ ಅನ್ವಯ 35 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ಬಂದ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸುಳ್ಳು ದಾಖಲೆಗಳ ಮಾಹಿತಿಯನ್ನು ಕೊಟ್ಟು ರೇಷನ್ ಕಾರ್ಡ್ ಮಾಡಿಸಿಕೊಂಡ ಜನರು ತುಂಬಾ ಇದ್ದಾರೆ ಹಾಗಾಗಿ ಈಗಾಗಲೇ ಸರ್ಕಾರದ ಕಡೆಯಿಂದ ಸರ್ವೆ ಮಾಡುವ ಮೂಲಕ ಅಧಿಕೃತ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸರ್ಕಾರದ ಹೊಸ ನಿಯಮಗಳ ಪ್ರಕಾರ ಕೆಳಗಿನ ಐದು ಹೊಸ ರೂಲ್ಸ್ ಗಳನ್ನ ಕಡ್ಡಾಯವಾಗಿ ಪಾಲಿಸುವವರಿಗೆ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
5 ಹೊಸ ನಿಯಮಗಳು ಇಲ್ಲಿವೆ
- BPL ಕಾರ್ಡ್ ಪಡೆಯುವ ರೈತರ ಹತ್ತಿರ 3 ಹೆಕ್ಟರ್ ಗಿಂತ ಹೆಚ್ಚು ಭೂಮಿ ಇರಬಾರದು.
- ನಗರ ಪ್ರದೇಶಗಳಲ್ಲಿ ವಾಸ ಮಾಡುವವರು 1000 ಅಡಿಗಿಂತ ದೊಡ್ಡ ಮನೆ ಹೊಂದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ.
- ಆದಾಯ ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ & 1.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.
- ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.
- ಸ್ವಂತ ವೈಟ್ ಬೋರ್ಡ್ ಕಾರ್ ಇರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
ಸರ್ಕಾರ ವಿಧಿಸಿರುವ ಮಾನದಂಡದ ಒಳಗೆ ನೀವು ಬಂದರೆ ಮಾತ್ರ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುತ್ತದೆ, ಇಲ್ಲವಾದಲ್ಲಿ ಸಿಗಲ್ಲ.
ಹಳ್ಳಿಯಲ್ಲಿ ವಾಸಿಸುವವರ ತಿಂಗಳ ವರಮಾನ 6,400 ಮತ್ತು ನಗರ ಭಾಗದಲ್ಲಿ ವಾಸಿಸುವ ಜನರ ತಿಂಗಳ ವರಮಾನ 11,850 ರೂ. ಮೀರಿದರೆ ಅಂಥವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ
ಅಷ್ಟೇ ಅಲ್ಲದೇ, ಯಾವುದೇ ಸರ್ಕಾರಿ ನೌಕರಿಯಲ್ಲಿ ಇದ್ದರೆ, ಖಾಸಗಿ ಕಂಪನಿಯ ಕಾಯಂ ಉದ್ಯೋಗಿ ಆಗಿದ್ದರೆ.ಸ್ವಂತ ಬಳಕೆಗಾಗಿ ವೈಟ್ ಬೋರ್ಡ್ ಕಾರ್ ಹೊಂದಿದವರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.