ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಕುರಿತು ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವುದಾಗಿ ಸಂಸದ ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.
ಸಿಲಿಕಾನ್ ಸಿಟಿಯ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತೇಜಸ್ವಿಸೂರ್ಯ (Tejasvi Surya) ಜಲಮಂಡಳಿ ಛೇರ್ಮನ್ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ನೀರಿನ ಅಭಾವ ಬರುತ್ತೆ ಅಂತಾ ಗೊತ್ತಿದ್ರೂ ಕ್ರಮ ಕೈಗೊಳ್ಳಲಿಲ್ಲ. ಈಗ ಟ್ಯಾಂಕರ್ ಗಳನ್ನ ಸುಪರ್ದಿಗೆ ತಗೋತಿವೆ ಅಂತಾರೆ. ಆದರೆ ಬರೀ ಸಭೆಗಳಿಂದ ಮಾಧ್ಯಮ ಹೇಳಿಕೆಯಿಂದ ಸಮಸ್ಯೆ ಬಗೆಹರಿಯಲ್ಲ. ಇನ್ನೊಂದು ವಾರದೊಳಗೆ ಸರ್ಕಾರ ತಾತ್ಕಾಲಿಕ ಪರಿಹಾರ ನೀಡಬೇಕು. ವಾರದೊಳಗೆ ಕ್ರಮ ತೆಗೆದುಕೊಳ್ಳದಿದ್ರೆ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡ್ತೀವೆ. ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರು ಪ್ರತಿಭಟಿಸುತ್ತೇವೆ ಎಂದರು
ನೀರಿನ ಸಮಸ್ಯೆಗೆ (Water Problem In Bengaluru) ಶಾಶ್ವತ ಪರಿಹಾರ ಏನು ಅನ್ನೋದನ್ನು ಹೇಳಬೇಕು. ಸರ್ಕಾರ ನೀರಿನ ಸಮಸ್ಯೆಗೆ ಏನ್ ಮಾಡ್ತಿದೆ ಅಂತಾ ಜನರಿಗೆ ತಿಳಿಸಬೇಕು. ಇಲ್ಲದಿದ್ರೆ ಪ್ರತಿಭಟನೆ ನಡೆಸಿ ಸರ್ಕಾರವನ್ನ ಎಚ್ಚರಿಸುತ್ತೇವೆ. ವಾಣಿಜ್ಯ ಉದ್ದೇಶಕ್ಕೆ ಟ್ರೀಟೆಡ್ ವಾಟರ್ ಕೊಡಲಿ. ಅಪಾರ್ಟ್ ಮೆಂಟ್ ಗಳನ್ನೇ ಗಮನಿಸೋದು ಬಿಟ್ಟು ಜನರಿಗೆ ನೀರು ಕೊಡಲಿ. ಬಿಬಿಎಂಪಿಯಿಂದ ಟ್ಯಾಂಕರ್ ಕೊಡ್ತೀವೆ ಅಂದಿದ್ರು. ಇದುವರೆಗೂ ಒಂದು ಏರಿಯಾಗೂ ಒಂದು ಹನಿ ನೀರು ಕೊಟ್ಟಿಲ್ಲ. ಟ್ಯಾಂಕರ್ ಗಳನ್ನ ವಶಕ್ಕೆ ಪಡೆದ್ರೆ ಜನರಿಗೆ ಸಮಸ್ಯೆಯಾಗುತ್ತೆ. ಸರ್ಕಾರ ಪರಿಹಾರ ಕೊಡೋ ಬದಲು ಸಮಸ್ಯೆ ಸೃಷ್ಟಿಸುತ್ತಿದೆ. ಸರ್ಕಾರದ ವಿರುದ್ಧ ಸಂಸದರು ಕಿಡಿಕಾರಿದ್ದಾರೆ.