ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಶುಕ್ರವಾರ ಬಂದಿದೆ.
ಶಿವನ ಪೂಜೆ ಮಾಡುವುದು ಹೇಗೆ:
ಮಹಾಶಿವರಾತ್ರಿ ದಿನ ಹಸುವಿನ ತುಪ್ಪದ ಜೊತೆ ಕರ್ಪೂರವನ್ನು ಬೆರೆಸಿ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಈ ದಿನ ರುದ್ರಾಕ್ಷಿಯ ಮಾಲೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಚಂದನ, ಹೂ, ದೀಪ ಹಾಗೂ ಧೂಪ ಹಚ್ಚಿ ಪೂಜೆ ಮಾಡಬೇಕು.
ಈ ಮಹಾಶಿವರಾತ್ರಿಯಂದು ಮರೆತೂ ಈ ಕೆಲಸ ಮಾಡಬೇಡಿ, ಇದರಿಂದ ಶಿವನ ಕೃಪೆಗೆ ಬದಲಾಗಿ ಕೋಪಕ್ಕೆ ಗುರಿಯಾಗಬೇಕಾಗಬಹುದು:
ತುಳಸಿಯನ್ನು ಬಳಸಬೇಡಿ:
ತುಳಸಿಯನ್ನು ಧರ್ಮಗ್ರಂಥಗಳಲ್ಲಿ ಪವಿತ್ರ ಮತ್ತು ದೇವತೆಯಂತೆ ಪರಿಗಣಿಸಲಾಗುತ್ತದೆ. ಜೊತೆಗೆ ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ಕೂಡ ಮಂಗಳಕರ. ಆದರೆ ಶಿವನ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು ಎಂಬುದನ್ನು ನೆನಪಿನಲ್ಲಿಡಿ. ಶಾಸ್ತ್ರಗಳ ಪ್ರಕಾರ, ತುಳಸಿ, ವಿಷ್ಣುವಿನ ಪ್ರಿಯವಾದ ವಸ್ತು. ಆದ್ದರಿಂದ ಅದನ್ನು ಶಿವಲಿಂಗದ ಮೇಲೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.
ಈ ಸಮಯದಲ್ಲಿ ಪೂಜೆ ಬೇಡ:
ವಿದ್ವಾಂಸರ ಪ್ರಕಾರ, ಪೂಜೆಗೆ ಸರಿಯಾದ ಸಮಯವನ್ನು ಮುಖ್ಯವಾಗಿ ಬೆಳಿಗ್ಗೆ ಪರಿಗಣಿಸಲಾಗುತ್ತದೆ. ಕೆಲವೊಮ್ಮೆ ಕೆಲಸದ ವಿಚಾರದಲ್ಲಿ ಸ್ವಲ್ಪ ತಡವಾಗಬಹುದು. ಆದರೆ ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳ ನಂತರ ಭೋಲೇನಾಥನನ್ನು ಪೂಜಿಸಬೇಕೆಂಬುದನ್ನು ನೆನಪಿನಲ್ಲಿಡಿ. ಮುಂಜಾನೆಯೇ ಪೂಜೆ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ. ಆ ನಂತರದ ಸಮಯದಲ್ಲಿ ಅಂದರೆ ಮಧ್ಯಾಹ್ನದ ವೇಳೆ ಶಿವ ಪೂಜೆ ಒಳ್ಳೆಯದಲ್ಲ.
ಈ ಪಾತ್ರಗಳಿಂದ ಅಭಿಷೇಕ ಮಾಡಬೇಡಿ:
ಶಿವಪೂಜೆಯಲ್ಲಿ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಆದರೆ ಆದಿಯೋಗಿಯ ಭಕ್ತರು ಶಿವರಾತ್ರಿಯ ದಿನ ಅಥವಾ ಶಿವಪೂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳನ್ನು ಅಭಿಷೇಕಕ್ಕೆ ಬಳಸಬೇಡಿ. ನೀವು ಶಿವಲಿಂಗವನ್ನು ಬೆಳ್ಳಿ, ಚಿನ್ನ ಅಥವಾ ಕಂಚಿನ ಪಾತ್ರೆಯಿಂದ ಮಾತ್ರ ಅಭಿಷೇಕಿಸಬೇಕು ಎಂಬುದನ್ನು ನೆನಪಿಡಿ, ಇದರಿಂದ ಭೋಲೇನಾಥನ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ಇರುವುದು.
ಈ ಹೂವು ಪೂಜೆಗೆ ನಿಷಿಧ್ಧ:
ಬಿಳಿ ಹೂವುಗಳು ಶಿವನಿಗೆ ತುಂಬಾ ಪ್ರಿಯವಾಗಿವೆ, ಆದರೆ ಬಿಳಿಯಾಗಿದ್ದರೂ ಸಹ, ಶಿವಾರಾಧನೆಯಲ್ಲಿ ಕೇದಿಗೆ ಹೂವನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಶಿವರಾತ್ರಿಯ ದಿನದಂದು, ನೀವು ಬಯಸಿದ ಫಲಿತಾಂಶವನ್ನು ಪಡೆಯಲು ಬಯಸಿದರೆ, ಶಿವಲಿಂಗದ ಮೇಲೆ ಕೇದಿಗೆ ಹೂವನ್ನು ಅರ್ಪಿಸಬೇಡಿ. ಇಲ್ಲದಿದ್ದರೆ ಶಿವ ಕೋಪಗೊಳ್ಳಬಹುದು.
ಶಿವನಿಗೆ ಏನನ್ನು ಅರ್ಪಿಸಬಾರದು
ಅರಶಿನವನ್ನು ದೇವರಿಗೆ ಅರ್ಪಿಸಬಾರದು. ತುಳಸಿ ದಳವನ್ನು ಅರ್ಪಿಸಬಾರದು. ಕುಂಕುಮವನ್ನು ದೇವರಿಗೆ ಅರ್ಪಿಸಬಾರದು. ಬಿಲ್ವ ಪತ್ರೆಯನ್ನು ಮಾತ್ರವೇ ದೇವರಿಗೆ ಅರ್ಪಿಸಬೇಕು. ಭಸ್ಮವನ್ನು ತಿಲಕದಂತೆ ಧರಿಸಿಕೊಳ್ಳಬೇಕು. ತೆಂಗಿನ ನೀರನ್ನು ದೇವರಿಗೆ ಅರ್ಪಿಸಬಾರದಾಗಿದೆ.
ಹಿತ್ತಾಳೆಯ ಪಾತ್ರೆಯನ್ನು ಬಳಸಬೇಡಿ
ಹಿತ್ತಾಳೆಯಿಂದ ಮಾಡಿದ ಯಾವುದೇ ಪರಿಕರ ಇಲ್ಲವೇ ಪಾತ್ರೆಯನ್ನು ದೇವರಿಗೆ ಅರ್ಪಿಸಬೇಡಿ. ಅಂತೆಯೇ ಶಿವಲಿಂಗಕ್ಕೆ ನೀರು ಹಾಕಬೇಡಿ. ತಾಮ್ರವನ್ನು ನೀವು ಬಳಸಬಹುದಾಗಿದೆ. ನೀರು, ಹಾಲು ಇಲ್ಲವೇ ಮೊಸರಿನಲ್ಲಿ ನಿಮ್ಮ ಉಗುರಗಳನ್ನು ನೆನೆಯಿಸಬೇಡಿ. ಉಗುರು ಮತ್ತು ಹಿತ್ತಾಳೆ ದೇವರಿಗೆ ಅರ್ಪಿಸುವ ವಸ್ತುವನ್ನು ಕಲುಷಿತಗೊಳಿಸುತ್ತದೆ ಎಂದು ನಂಬಲಾಗಿದೆ.