ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 9000 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸರ್ಕಾರ ಅಧಿಸೂಚನೆ ನೀಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾರ್ಚ್ 9ರಿಂದ ಶುರುವಾಗಲಿದ್ದು, ಏಪ್ರಿಲ್ 8 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಆಗಿರುತ್ತದೆ. ಬರೋಬರಿ 9000 (ಸಂಭಾವ್ಯ) ಟೆಕ್ನೀಷಿಯನ್ ಹುದ್ದೆಗಳನ್ನು ದೇಶದ ಎಲ್ಲ ರೈಲ್ವೆ ವಲಯಗಳಲ್ಲಿ ನೇಮಕ ಮಾಡಲು ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಜತೆಗೆ ಪ್ರಮುಖ ಸಂಭಾವ್ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ ಇಲಾಖೆ, ರೈಲ್ವೆ ನೇಮಕಾತಿ ಮಂಡಳಿ
ಹುದ್ದೆ ಹೆಸರು : ರೈಲ್ವೆ ಟೆಕ್ನೀಷಿಯನ್
ಸಂಭಾವ್ಯ ಹುದ್ದೆಗಳ ಸಂಖ್ಯೆ : 9000
ಪ್ರಮುಖ ದಿನಾಂಕಗಳು
ಎಂಪ್ಲಾಯ್ಮೆಂಟ್ ನ್ಯೂಸ್ನಲ್ಲಿ ಅಧಿಸೂಚನೆ ಬಿಡುಗಡೆ : ಫೆಬ್ರುವರಿ, 2024
ಆನ್ಲೈನ್ ಅಪ್ಲಿಕೇಶನ್ ಸ್ವೀಕಾರ ಅವಧಿ : ಮಾರ್ಚ್ – ಏಪ್ರಿಲ್ 2024
ಕಂಪ್ಯೂಟರ್ ಆಧಾರಿತ ಪರೀಕ್ಷೆ ಅವಧಿ : ಅಕ್ಟೋಬರ್ ಮತ್ತು ಡಿಸೆಂಬರ್ 2024
ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದವರ ಪಟ್ಟಿ ಬಿಡುಗಡೆ : ಫೆಬ್ರುವರಿ 2025
ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ವಿದ್ಯಾರ್ಹತೆ
ಎಸ್ಎಸ್ಎಲ್ಸಿ ನಂತರ ಐಟಿಐ ಶಿಕ್ಷಣ ಪಡೆದು ಎನ್ಸಿವಿಟಿ ಅಥವಾ ಎಸ್ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು. ಅಥವಾ
ಡಿಪ್ಲೊಮ ಇನ್ ಇಂಜಿನಿಯರಿಂಗ್ ಅನ್ನು ಸಂಬಂಧಿತ ವಿಭಾಗದಲ್ಲಿ ಪಡೆದಿರಬೇಕು. ಅಥವಾ
ತಾಂತ್ರಿಕ ವಿಷಯಗಳಲ್ಲಿ ಪದವಿ/ ಇಂಜಿನಿಯರಿಂಗ್ ಅನ್ನು ಪಡೆದಿರಬೇಕು.
ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ವಯಸ್ಸಿನ ಅರ್ಹತೆ
ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಆಯ್ಕೆ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ / ಪಿಇಟಿ / ಪಿಎಸ್ಟಿ / ವೈದ್ಯಕೀಯ ಪರೀಕ್ಷೆ / ಮೂಲ ದಾಖಲೆಗಳ ಪರಿಶೀಲನೆ, ಇಷ್ಟು ಹಂತಗಳು ಇರುತ್ತವೆ. ಸವಿವರ ಅಧಿಸೂಚನೆ ನಂತರ ನೇಮಕಾತಿ ವಿಧಾನದ ಕಂಪ್ಲೀಟ್ ಡೀಟೇಲ್ಸ್ ಅನ್ನು ವಿಕ ಪೋರ್ಟಲ್ನ ಜಾಬ್ ಸೆಕ್ಷನ್ನಲ್ಲಿ ಮತ್ತೆ ತಿಳಿಸಲಾಗುವುದು.
ಭಾರತೀಯ ರೈಲ್ವೆಯ ಅಹ್ಮೆದಾಬಾದ್, ಅಜ್ಮೀರ್, ಅಲಹಾಬಾದ್, ಬೆಂಗಳೂರು, ಭೂಪಾಲ್, ಭುಬನೇಶ್ವರ್, ಬಿಲಾಶ್ಪುರ್, ಛಂಡೀಘಡ, ಚೆನ್ನೈ, ಗೋರಖ್ಪುರ್, ಗುವಾಹಟಿ, ಜಮ್ಮು, ಕೋಲ್ಕತ್ತ, ಮಾಲ್ದಾ, ಮುಂಬೈ, ಮುಜಾಫರ್ಪುರ್, ಪಾಟ್ನಾ, ರಾಂಚಿ, ಸಿಕಂದರಾಬಾದ್, ಸಿಲಿಗುರಿ, ತ್ರಿವೇಂಡ್ರಮ್ ರೈಲ್ವೆ ಆರ್ಆರ್ಬಿಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.