ಬೆಂಗಳೂರು:- ನೀವು ರಾಜಧಾನಿ ಬೆಂಗಳೂರಿನಲ್ಲಿ ಪಿಜಿ ಹುಡುಕುತ್ತಿದ್ದರೆ ಮಿಸ್ ಮಾಡ್ದೆ ಸುದ್ದಿ ಓದಿ. ಇನ್ನೂ ಎರಡ್ಮೂರು ದಿನ ನಿಮಗೆ ಸಿಗೋದಿಲ್ಲಾ ಪಿಜಿ.
ಹೌದು, ನಗರದ ರಾಮೇಶ್ವರಂ ಕೆಫೆ ಸ್ಪೋಟ ಬೆನ್ನಲ್ಲೇ ಪಿಜಿ ಮಾಲೀಕರು ಹೈ ಅಲರ್ಟ್ ಆಗಿದ್ದಾರೆ. ಒಂದೆರಡು ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಸಿಗೋದಿಲ್ಲಾ ಪಿಜಿ ಸಿಗಲ್ವಂತೆ. ಈ ಹಿಂದೆ ದಿನದ ಬಾಡಿಗೆಗೆ ಸಿಗುತ್ತಿದ್ದ ಪಿಜಿಗಳು, ಇನ್ಮುಂದೆ ಪಿಜಿಗಳಲ್ಲಿ ದಿನ ಬಾಡಿಗೆ ಇಲ್ಲಾ. ಗೆಳೆಯರನ್ನು ಕರೆತರುವಂತಿಲ್ಲಾ… ಹೊಸದಾಗಿ ಬರೋ ಬಾಡಿಗೆದಾರರ ಮೇಲೆ ಹೆಚ್ಚಿನ ನಿಗಾವಹಿಸಲು ನಿರ್ಧಾರ ಮಾಡಲಾಗಿದೆ.
ಆಧಾರ್ ಕಾರ್ಡ್, ಅಡ್ರೇಸ್ ಫ್ರೂಫ್ ಇಲ್ಲದೇ ಹೋದ್ರೆ ಪಿಜಿಗಳಿಗೆ ನೋ ಎಂಟ್ರಿ….! ಪಿಜಿಯಲ್ಲಿ ವಾಸವಿರಲು ಪೋಷಕರ ಅನುಮತಿಯನ್ನು ಮಾಲೀಕರು ಕಡ್ಡಾಯಗೊಳಿಸಿದ್ದಾರೆ. ಪೋಷಕರ ದೂರವಾಣಿ ಸಂಖ್ಯೆ, ಮನೆ ವಿಳಾಸ ನೀಡಿದ್ರೆ ಮಾತ್ರ ಪಿಜಿಯಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಆತಂಕ ಹೆಚ್ಚಿಸುತ್ತಿರೋ ಇಂತಾ ಪ್ರಕರಣಗಳಿಗೆ ಬ್ರೇಕ್ ಹಾಕಲು ಸಜ್ಜಾಗಿದ್ದು ಈ ಹಿಂದೆ ಪೋಲಿಸ್ ಇಲಾಖೆ ನೀಡಿರುವ ಸುತ್ತೊಲೆಯನ್ನು ಯಥಾವತ್ತಾಗಿ ಮಾಲೀಕರು ಪಾಲಿಸುತ್ತಿದ್ದಾರೆ.