2024ನೇ ವರ್ಷದ 71ನೇ ಸಾಲಿನ ಮಿಸ್ ವರ್ಲ್ಡ್ ಕಿರೀಟವನ್ನು ಚೆಕ್ ರಿಪಬ್ಲಿಕ್ನ ಕ್ರಿಸ್ಟಿನಾ ಅವರು ಮುಡಿಗೇರಿಸಿಕೊಂಡಿದ್ದಾರೆ. ಈ ಬಾರಿ ಕರ್ನಾಟಕ ಮೂಲಕ ಸಿನಿ ಶೆಟ್ಟಿ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ.
ವಿವಿಧ ದೇಶಗಳ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಮಿಸ್ ವರ್ಲ್ಡ್’ನಲ್ಲಿ ಭಾಗವಹಿಸುತ್ತಾರೆ. ಇದರಲ್ಲಿ ಗೆದ್ದವರಿಗೆ ಸಾಕಷ್ಟು ಜನಪ್ರಿಯತೆ ಸಿಗುವುದರ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಾರೆ. ಅದರಲ್ಲೂ ಹೆಚ್ಚಾಗಿ ಸಿನಿಮಾ ರಂಗದಲ್ಲಿ ಖ್ಯಾತಿ ಘಳಿಸುತ್ತಾರೆ. ಅಂತೆಯೇ ಈ ಭಾರಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ 71ನೇ ಸಾಲಿನ ಮಿಸ್ ವರ್ಲ್ಡ್ ಕಾರ್ಯಕ್ರಮ ನಡೆದಿದ್ದು ಚೆಕ್ ರಿಪಬ್ಲಿಕ್ನ ಕ್ರಿಸ್ಟಿನಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ಒಲಿದಿದೆ. . 28 ವರ್ಷಗಳ ಬಳಿಕ ಭಾರತದಲ್ಲಿ ಕಾರ್ಯಕ್ರಮ ನಡೆದಿದೆ ಅನ್ನೋದು ವಿಶೇಷವಾಗಿದೆ.
‘ಮಿಸ್ ವರ್ಲ್ಡ್ 2024’ ಕಾರ್ಯಕ್ರಮದಲ್ಲಿ 115 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಈ ಕಾರ್ಯಕ್ರಮ ಆರಂಭ ಆಯಿತು. ಸೋನಿ ಲೈವ್ನಲ್ಲಿ ಈ ಕಾರ್ಯಕ್ರಮ ನೇರ ವೀಕ್ಷಣೆಗೆ ಅವಕಾಶ ಇತ್ತು. ಈ ಕಾರ್ಯಕ್ರಮದಲ್ಲಿ ಕೃತಿ ಸನೋನ್ ಮೊದಲಾದವರು ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಕ್ರಿಸ್ಟಿನಾ ವಿನ್ನರ್ ಎಂದು ಘೋಷಣೆ ಮಾಡಲಾಯಿತು.
‘ಮಿಸ್ ವರ್ಲ್ಡ್’ ಸ್ಪರ್ಧೆಗೆ 12 ಜಡ್ಜ್ಗಳ ಪ್ಯಾನಲ್ ಇದೆ. ಬಾಲಿವುಡ್ ನಟ ಕೃತಿ ಸನೋನ್, ಪೂಜಾ ಹೆಗ್ಡೆ ಮೊದಲಾದವರು ಇದರ ಜಡ್ಜ್ ಆಗಿದ್ದಾರೆ. ಇದರ ಜೊತೆ ಮೂರು ಮಿಸ್ ವರ್ಲ್ಡ್ ಟೈಟಲ್ ಹೋಲ್ಡರ್ಗಳು ಕೂಡ ಇದ್ದರು.
ಲಾ ಹಾಗೂ ಬಿಸ್ನೆಸ್ ಅಡ್ಮಿಸ್ಟ್ರೇಷನ್ನಲ್ಲಿ ಅವರು ಶಿಕ್ಷಣ ಪಡೆಯುತ್ತಿರುವ ಕ್ರಿಸ್ಟಿನಾ ಅಂತಾರಾಷ್ಟ್ರೀಯ ಮಾಡೆಲ್ ಕೂಡ ಹೌದು. ತಮ್ಮದೇ ಫೌಂಡೇಷನ್ ಆರಂಭಿಸಿ ಸಾಮಾಜಿಕ ಕೆಲಸ ಮಾಡುತ್ತಿರುವ ಕ್ರಿಸ್ಟಿನಾ ತಂಜಾನಿಯಾದಲ್ಲಿ ಬಡ ಮಕ್ಕಳಿಗಾಗಿ ಇಂಗ್ಲಿಷ್ ಸ್ಕೂಲ್ ತೆರೆದಿದ್ದಾರೆ.