ಇಟಲಿಯ ಲೇಕ್ ಗಾರ್ಡಾ ಬಳಿಯ ಖ್ಯಾತ ಪ್ರದರ್ಶನದಿಂದ ಶಿಲ್ಪಿ ಉಂಬರ್ಟೊ ಮಾಸ್ಟ್ರೊಯಾನಿ ರಚಿಸಿದ ಸುಮಾರು 50 ಚಿನ್ನದ ಕಲಾಕೃತಿಗಳನ್ನು ಕಳವು ಮಾಡಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಡಿಸೆಂಬರ್ ಅಂತ್ಯದಲ್ಲಿ ತೆರೆಯಲಾದ ಮತ್ತು ಶುಕ್ರವಾರ ಮುಕ್ತಾಯಗೊಳ್ಳಲಿರುವ ” ಚಿನ್ನದ” ಪ್ರದರ್ಶನದಿಂದ 1.2 ಮಿಲಿಯನ್ ಯುರೋ (1.3 ಮಿಲಿಯನ್ ಯುಎಸ್ಡಿಗಿಂತ ಹೆಚ್ಚು) ಮೌಲ್ಯದ ನಲವತ್ತೊಂಬತ್ತು ಕಲಾಕೃತಿಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇದು ವಿಶೇಷ ಗ್ಯಾಂಗ್ ನಡೆಸಿರುವ ಕಳ್ಳತನವಾಗಿದೆ ಎಂದು ವಸ್ತು ಸಂಗ್ರಹಾಲಯದ ಮುಖ್ಯಸ್ಥ ಗಿಯೋರ್ಡಾನೊ ಬ್ರೂನೋ ಗೆರಿ ಹೇಳಿದ್ದಾರೆ.