ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪುಡಿ ರೌಡಿಗಳ ಅಟ್ಟಹಾಸ ಮೆರೆದಿದ್ದು ಸೈಟ್ ವಿಚಾರಕ್ಕೆ ಕಾಂಪೌಂಡ್ ಒಡೆದು ಗಲಾಟೆ ಮಾಡಿದ ಪುಂಡರು ಕಳೆದ 1 ರಂದು ಜೆಪಿ ನಗರದ 6 ನೇ ಮುಖ್ಯರಸ್ತೆಯ ಸಾರಕ್ಕಿ ಬಳಿ ನಡೆದ ಘಟನೆ ತಡವಾಗಿ ಬೆಳಕಿಗೆ
ನರಸರಾಜು ಎಂಬುವವರಿಗೆ ಸೇರಿದ ಸರ್ವೆ ನಂಬರ್ 23/21 ಸೈಟ್ ಇದೆ ಈ ಸೈಟ್ ಖಾಲಿ ಜಾಗವಿದ್ದ ಕಾಂಪೌಂಡ್ ಹಾಕಲಾಗಿತ್ತು ಇದೇ ಸೈಟ್ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ ಏಕಾಏಕಿ ರಾತ್ರಿ ವೇಳೆ ಬಂದ ರೌಡಿಗಳು ಗಲಾಟೆ ಮಾಡಿ ಕಾಂಪೌಂಡ್ ಒಡೆದಿದ್ದಾರೆ ಕೂಡಲೇ ಸ್ಥಳೀಯರು ನರಸರಾಜು ಕುಟುಂಬಸ್ಥರಿಗೆ ಮಾಹಿತಿ ಕೊಟ್ಟಿದ್ದಾರೆ
ಈ ವೇಳೆ ಅಲ್ಲಿಗೆ ಬಂದ ನರಸರಾಜು,ಪತ್ನಿ ಪುಷ್ಪ ಮಗ ಯುವರಾಜ್ ತಡೆಯಲು ಹೋಗಿದ್ದಾರೆ ಆಗ ಮಚ್ಚು ಲಾಂಗ್ ದೊಣ್ಣೆಯಿಂದ ಒಡೆಯಲು ಬಂದಿರುವ ಆರೋಪ
ಕಾಂಪೌಂಡ್ ಒಡೆಯುವುದನ್ನು ಪ್ರಶ್ನೆ ಮಾಡಲು ಹೋದಾಗ ಕೊಲೆ ಮಾಡುವುದಾಗಿ ಬೆದರಿಕೆ ಬಳಿಕ ಜೆ.ಪಿ.ನಗರ ಠಾಣೆಗೆ ದೂರು ನೀಡಿದ ಜಮೀನು ಮಾಲೀಕ ನರಸರಾಜು ಈ ಸಂಬಂಧ ಆರೋಪಿಗಳಾದ ಸುನೀಲ್ ,ಮೂರ್ತಿ,ಗಿರಿಜಾ,ಪೂಜಿತಾ,ಮಂಜು ,ವೆಂಕಟೇಶ್ ಸೇರಿ ಇತರರ ವಿರುದ್ಧ ಎಫ್ ಐಆರ್ ದಾಖಲು
ಆರೋಪಿಗಳ ಪತ್ತೆಗೆ ಬಲೆ ಬಿಸಿರೋ ಜೆ.ಪಿ.ನಗರ ಪೊಲೀಸರು ಇನ್ನೂ ಶೋಧ ಕಾರ್ಯ ನಡೆಸುತ್ತಿದ್ದಾರೆ.